ಬಣ್ಣ ಬಣ್ಣದ ರಜಾ-ಚಿಂತನ ರಂಗ ಅಧ್ಯಯನ ಕೇಂದ್ರದ ಮಕ್ಕಳ ರಜಾಮೇಳ

ಬಣ್ಣದ ರಜೆ

ಬಣ್ಣದ ರಜೆ

ಸಹಯಾನದಲ್ಲಿ ಚಿಂತನದಿಂದ ‘ಬಣ್ಣಬಣ್ಣದ ರಜಾ ‘ – ಮಕ್ಕಳ ಶಿಬಿರ
‘ಚಿಂತನ ರಂಗ ಅಧ್ಯಯನ ಕೇಂದ್ರ’ ಕಳೆದ 20 ವರ್ಷಗಳಿಂದಲೂ ರಂಗಭೂಮಿಯಲ್ಲಿ, ಅದರಲ್ಲೂ ಮಕ್ಕಳ ರಂಗಭೂಮಿಯಲ್ಲಿ ವಿಶೇಷವಾಗಿ ಕೆಲಸ ನಿರ್ವಹಿಸುತ್ತ ಬಂದಿದ್ದು ರಂಗ ಶಿಕ್ಷಣದಡಿ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ ಸಂಘಟಿಸಿದೆ. ಕಳೆದ ಎಂಟು ವರ್ಷಗಳಿಂದ ಗ್ರಾಮೀಣ ಪ್ರದೇಶದ ಮಕ್ಕಳ ಬೇಸಿಗೆ ಶಿಬಿರ ನಡೆಸುತ್ತಾ ಬಂದಿದೆ. ಈ ಬಾರಿ ಸಹಯಾನ – ಆರ್ ವಿ ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರವು ಕೆರೆಕೋಣದಲ್ಲಿ 40 ಮಕ್ಕಳಿಗೆ ‘ಚಿಂತನ ರಂಗ ಅಧ್ಯಯನ ಕೇಂದ್ರ’ವು ‘ಬಣ್ಣಬಣ್ಣದ ಬೇಸಿಗೆ’ ಬೇಸಿಗೆ ಶಿಬಿರವನ್ನು ದಿನಾಂಕ 21-10-2013 ರಿಂದ 27-10-2013 ರ ವರೆಗೆ ಹಮ್ಮಿಕೊಂಡಿದೆ.
ಬಾಲ್ಯದ ಬಣ್ಣಗಳ ಮೇಳ. ನಾಗರಿಕತೆಯ ಹೊಡೆತಕ್ಕೆ ಸಿಕ್ಕು ಬಣ್ಣಗೆಡುತ್ತಿರುವ ಸಂದರ್ಭದಲ್ಲಿ ಬಾಲ್ಯಕ್ಕಿಷ್ಟು ಬಣ್ಣ ತುಂಬಬೇಕೆಂಬುದೇ ನಮ್ಮ ಹಂಬಲ. ಮಾಹಿತಿಗಳನ್ನು ಮೊಗೆ ಮೊಗೆದು ತುಂಬುವದೇ ಶಿಕ್ಷಣ ಎಂಬಷ್ಟರ ಮಟ್ಟಿಗೆ ಇಂದಿನ ಶಿಕ್ಷಣ ಹದಗೆಟ್ಟಿದೆ. ಮೆದುಳಿನ ಕೆಲಭಾಗಗಳನ್ನಷ್ಟೇ ಬೆಳೆಸುತ್ತ ಮಕ್ಕಳನ್ನು ಅಂಗವಿಕಲರನ್ನಾಗಿಸುತ್ತಿದೆ. ಜೀವನಕ್ಕೆ ಸೌಂದರ್ಯ ತಂದುಕೊಡುವ ಎಲ್ಲ ಸಂಗತಿಗಳೂ ಕಾಲಹರಣ ಎಂದೇ ಬಿಂಬಿಸಲಾಗುತ್ತದೆ. ಹಣಗಳಿಸುವ ಯಂತ್ರಗಳನ್ನಾಗಿ ಅವರನ್ನು ಸಿದ್ಧಪಡಿಸಲಾಗುತ್ತಿದೆ. ಹೊರಗಿನ ಲೋಕವನ್ನು ಕಣ್ತೆರೆದು ನೋಡುವ, ಅದರೊಂದಿಗೆ ಸಂಬಂಧ ಬೆಳೆಸಿಕೊಳ್ಳುವ ಸಾಧ್ಯತೆಗಳನ್ನು ಕಳೆದುಕೊಂಡು ರೊಬೋಟ್ ಸಂತಾನಗಳಾಗುತ್ತಿದ್ದಾರೆ.. ಇದೆಲ್ಲವನ್ನೂ ಮೀರಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನೂ ‘ನಮ್ಮವರು’ ಎಂಬ ಸಮಷ್ಠಿ ಪ್ರಜ್ಞೆಯೊಂದಿಗೆ ನೋಡುವ ಕಿರುನೋಟವನ್ನು . ದೇಹ ಮನಸ್ಸುಗಳೆರಡನ್ನೂ ಒಟ್ಟಿಗೇ ಬೆಸೆಯುವ, ಅವುಗಳ ಸಾಧ್ಯತೆಗಳನ್ನು ಅನ್ವೇಶಿಸುವ ರಂಗ ತರಬೇತಿಯ ಮೂಲಕ ಸಾಧಿಸುವ ಆಶಯ ಈ ಶಿಬಿರದ್ದು. ಶಿಬಿರವು ಅಭಿನಯ, ಬಣ್ಣ, ಚಿತ್ರ, ಶಿಲ್ಪ, ನೃತ್ಯ, ಸಂಗೀತ, ಸಾಹಿತ್ಯ, ಜನಪದ ಕಲೆಗಳ ಸಾಹಚರ್ಯಗಳಿಂದ ಕೂಡಿರುತ್ತದೆ.
ಸಂಪನ್ಮೂಲ ವ್ಯಕ್ತಿಗಳಾಗಿ ವಿದೂ ಉಚ್ಚಿಲ, ಬಿ ವಿ ಭಂಡಾರಿ, ಸತೀಶ ಯಲ್ಲಾಪುರ, ತಮ್ಮಣ್ಣ ಬೀಗಾರ, ವಿಶ್ವನಾಥ ಹಿರೇಮಠ, ನಾಗರಾಜ ಧಾರೇಶ್ವರ, ಮಾಧವಿ ಭಂಡಾರಿ, ಸುನಂದಾ ಭಟ್, ಹರೀಶ ಭಂಡಾರಿ, ದಾಮೋದರ ನಾಯ್ಕ, ಶ್ರೀನಿವಾಸ ನಾಯ್ಕ, ಗಣೆಶ ಭಂಡಾರಿ ಅನ<ತ ನಾಯ್ಕ ಮುಂತಾದವರು ಭಾಗವಹಿಸುತ್ತಿದ್ದಾರೆ,
ಭಾಗವಹಿಸಲು ಆಸಕ್ತರಾದ ಮಕ್ಕಳು 19-10-2013 ರ ಒಳಗೆ ದಾಮೋದರ ನಾಯ್ಕ 9480561800, ಶ್ರೀನಿವಾಸ ನಾಯ್ಕ – 08277340393 ಇವರಲ್ಲಿ ಹೆಸರನ್ನು ನೋಂದಾಯಿಸಬಹುದು. ಯಾವುದೇ ಶುಲ್ಕ ಇರುವುದಿಲ್ಲ.
ವಿಠ್ಠಲ ಭಂಡಾರಿ,

ಅಧ್ಯಕ್ಷರು

ಶ್ರೀಪಾದ ಭಟ್
ಕಾರ್ಯದರ್ಶಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s