‘ಸಹಯಾನ’ದಲ್ಲಿ ಮಜವಾಗಿ ಕಳೆದ ರಜಾ

 

ಏಳು ದಿನಗಳ ಕಾಲ ಕೆರೆಕೋಣದ ‘ಸಹಯಾನ’ದ ತುಂಬಾ ಮಕ್ಕಳ ಓಡಾಟ; ಗೌಜು, ಗಲಾಟೆ, ಕುಣಿತ, ನೆಗೆತ; ಜಾತಿ, ಧರ್ಮ, ಲಿಂಗ ಅಸಮಾನತೆಗಳ ಸೋಂಕು ಇಲ್ಲದೇ ಬಾಲ್ಯದ ಕನಸುಗಳಿಗೆ ಇನ್ನೊಂದಿಷ್ಟು ರಂಗು ತುಂಬಿಕೊಳ್ಳುವ, ಹೊಳಪು ಮೆತ್ತಿಕೊಳ್ಳುವ ಉತ್ಸಾಹ ಮಕ್ಕಳದ್ದು. ‘ಎಲೆಗಳು ನೂರಾರು, ಭಾವದ ಎಲೆಗಳು ನೂರಾರು. ಎಲೆಗಳ ಬಣ್ಣ ಒಚಿದೇ. . . ‘ ಎನ್ನುವ ಕವಿತೆಯ ಸಾಲುಗಳಿಗೆ ಹೊಸ ಅರ್ಥ ಕೊಡುವಂತೆ ಮಕ್ಕಳ ಭಾವಗಳ ಅಭಿವ್ಯಕ್ತಿಗೆ ‘ಸಹಯಾನ’ ಸಾಕ್ಷಿಯಾಗಿತ್ತು.

 

banna raje 1
ಟಿವಿ ಇಲ್ಲವೇ ಕ್ರಿಕೆಟ್ ನಲ್ಲಿ ತಲ್ಲೀನರಾಗಿ ಪಾಲಕರಿಂದ ಬೈಸಿಕೊಳ್ಳಬೇಕಾದ ಮಕ್ಕಳು ಚಿಂತನ ರಂಗ ಅಧ್ಯಯನ ಕೇಂದ್ರ ಮತ್ತು ಸಹಯಾನ (ಡಾ. ಆರ್.ವಿ. ಭಂಡಾರಿ ನೆನಪಿನ ಸಂಸ್ಕತಿ ಅಧ್ಯಯನ ಕೇಂದ್ರ)ವು ಸುಬ್ಬಿ ಭಂಡಾರಿ ನೆನಪಿನಲ್ಲಿ ಕೆರೆಕೋಣದಲ್ಲಿ ನಡೆಸಿದ ‘ಬಣ್ಣ ಬಣ್ಣದ ರಜಾ’ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಒಂದು ವಾರಗಳ ಕಾಲ ತಮ್ಮನ್ನೇ ತಾವು ಮರೆತು ರಜಾಕ್ಕೆ ಬಣ್ಣ ತುಂಬಿದ್ದು ಹೀಗೆ. ಗ್ರಾಮೀಣ ಪ್ರದೇಶದ ಸುಮಾರು 45 ಮಕ್ಕಳು ಭಾಗವಹಿಸಿದ ಈ ಶಿಬಿರದಲ್ಲಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನೂ ‘ನಮ್ಮವರು’ ಎಂಬ ಸಮಷ್ಠಿ ಪ್ರಜ್ಞೆಯೊಂದಿಗೆ ನೋಡುವ ಕಿರುನೋಟವನ್ನು, ದೇಹ ಮನಸ್ಸುಗಳೆರಡನ್ನೂ ಒಟ್ಟಿಗೇ ಬೆಸೆಯುವ, ಅವುಗಳ ಸಾಧ್ಯತೆಗಳನ್ನು ಅನ್ವೇಶಿಸುವ ರಂಗ ತರಬೇತಿಯ ಮೂಲಕ ಸಾಧಿಸುವ ಕೆಲಸ ನಡೆಯಿತು. ಶಿಬಿರವು ಅಭಿನಯ, ಬಣ್ಣ, ಚಿತ್ರ, ಶಿಲ್ಪ, ನೃತ್ಯ, ಸಂಗೀತ, ಸಾಹಿತ್ಯ, ಜನಪದ ಕಲೆಗಳ ಸಾಹಚರ್ಯಗಳಿಂದ ಕೂಡಿತ್ತು.ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಇರುವ ಪಠ್ಯೇತರ ಸಾಧ್ಯತೆಗಳನ್ನು ಪ್ರಯೋಗದ ಮೂಲಕ ಕಂಡು ಕೊಳ್ಳುವ ಪ್ರಯತ್ನದ ಭಾಗವೇ ಆದ ಈ ಶಿಬಿರ ಮಕ್ಕಳ ಕಲಾ ಪ್ರದರ್ಶದ ಮೂಲಕ ಸಂಪನ್ನಗೊಂಡಿತು.
ಏಳು ದಿನಗಳ ಕಾಲ ರಂಗಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಂಪನ್ಮೂಲ ವ್ಯಕ್ತಿಗಳು ಮಕ್ಕಳೊಂದಿಗೆ ಕಳೆದರು. ಸಾಂಪ್ರದಾಯಿಕವಲ್ಲದ ರೀತಿಯಲ್ಲಿ- ಸಂಪನ್ಮೂಲ ವ್ಯಕ್ತಿಗಳೂ ಸಂಘಟಕರೂ ಆಕ್ಷಣ ಮಕ್ಕಳಾಗಿ ಶಿಬಿರದ ಮಕ್ಕಳೊಂದಿಗೆ ಪುಗ್ಗೆ ಹಿಡಿದು (ಬಲೂನ್) ಕೇಕೆ ಹಾಕಿ ಕುಣಿಯುವುದರೊಂದಿಗೆ- ಪ್ರಾರಂಭವಾದ ಈ ಶಿಬಿರ ಕೊನೆಗೊಂಡಿದ್ದೂ ಇಂಥ ಕುಣಿತದ ಮೂಲಕವೇ.
ಶಿಬಿರದುದ್ದಕ್ಕೂ ಇದ್ದು ವಿವಿಧ ರೀತಿಯ ರಂಗ ವ್ಯಾಯಾಮ, ಆಟ, ಅಭಿನಯಗಳನ್ನು ಹೇಳಿಕೊಡುತ್ತಲೇ ಕಾಡಿನ ಜನರ ಮುಗ್ಧತೆ ಮತ್ತು ಪರಿಸರ ಪ್ರೀತಿ, ನಾಡಿನವರ ಕೊಳ್ಳುಬಾಕತನದ ಅಪಾಯದ ಬಗ್ಗೆ ಹೇಳುವ ‘ಜಗತ್ತಿನ ಕೊನೆಯ ಮನುಷ್ಯ’ ನಾಟಕ ಮಾಡಿಸಿದ ಮಂಗಳುರಿನ ರಂಗ ನಿರ್ದೇಶಕ ವಿದ್ದು ಉಚ್ಚಿಲ್, ಸುಮಾರು ಮೂವತ್ತು ಮಕ್ಕಳನ್ನು ರಂಗದ ಮೇಲೆ ಬಳಸಿಕೊಂಡಿದ್ದು ಆಕರ್ಷಕವಾಗಿತ್ತು. ಖ್ಯಾತ ನೃತ್ಯ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯಅವರು ಮಕ್ಕಳಿಂದ ಹಲವು ರೂಪಕ ಮತ್ತು ನೃತ್ಯಗಳನ್ನು ಮಾಡಿಸಿದರು. ಮಾಧವಿ ಭಂಡಾರಿ ಕೆರೆಕೋಣ ಮಕ್ಕಳಿಗೆ ಕವಿತೆ ಬರೆಯುವುದನ್ನು ಹೇಳಿಕೊಟ್ಟರು. ಖ್ಯಾತ ಚಿತ್ರಕಲಾವಿದ ಸತೀಶ ಯಲ್ಲಾಪುರ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ತಮ್ಮಣ್ಣ ಬೀಗಾರ ಮಕ್ಕಳಿಗೆ ಸುಲಭದಲ್ಲಿ ಗ್ರೀಟಿಂಗ್ ತಯಾರಿಸುವ ಮತ್ತು ಚಿತ್ರ ಬಿಡಿಸುವ ಕಲೆಯನ್ನು ಕಲಿಸಿದರು. ಹಿರಿಯ ಕಲಾವಿದ ಬಿ.ವಿ.ಭಂಡಾರಿ, ಹರೀಶ ಭಂಡಾರಿ, ಮಂಜುನಾಥ ಕರ್ಕಿ ಮಣ್ಣಿನ ಕಲಾಕೃತಿ ಮಾಡುವುದನ್ನು ಹೇಳಿಕೊಟ್ಟರು. ಮಕ್ಕಳಂತೂ ಅರ್ಥದಿನಗಳ ಕಾಲ ಜೇಡಿಮಣ್ಣಿನೊಂದಿಗೆ ಬೆರೆತು ತಮ್ಮ ಕಲ್ಪನೆಯ ಹಲವು ಮಣ್ಣಿನ ಕಲಾಕೃತಿಗಳನ್ನು ಮಾಡಿಟ್ಟರು. 

 ???????????????????????????????ಮುಂಡಗೋಡಿನ ವಿದ್ವಾನ್ ವಿಶ್ವನಾಥ ಹಿರೇಮಠ ಕಲಿಸಿದ ಸುಂದರವಾದ ಮಕ್ಕಳ ಹಾಡುಗಳು ಶಿಬಿರ ಮುಗಿದ ಮೇಲೂ ಗುನುಗುನಿಸುತ್ತಿದ್ದವು. ಗಣೇಶ ಭಂಡಾರಿ ಯಕ್ಷಗಾನದ ಹೆಜ್ಜೆ ಹೇಳಿಕೊಟ್ಟರು. ದಾಮೋದರ ನಾಯ್ಕ ಮತ್ತು ಶ್ರೀನಿವಾಸ ನಾಯ್ಕ ಅವರು ನಿರ್ದೇಶಕರಾಗಿ ನಡೆಸಿಕೊಟ್ಟ ಈ ಶಿಬಿರದಲ್ಲಿ ಯಮುನಾ ಗಾಂವ್ಕರ್, ಶ್ರೀಪಾದ ಭಟ್, ಪ್ರಮೋದ ನಾಯ್ಕ, ಅನಂತ ನಾಯ್ಕ, ವಿದ್ಯಾಧರ ಕಡತೋಕ, ಮಾಸ್ತಿ ಗೌಡ, ರಾಘವೇಂದ್ರ, ನೇತ್ರಾವತಿ ಮೊದಲಾದವರು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಶಿಬಿರದ ಯಶಸ್ಸಿಗೆ ಕಾರಣರಾದರು.
ಸಹಯಾನದ ಕಾರ್ಯದರ್ಶಿ ಡಾ. ವಿಠ್ಠಲ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭದಲ್ಲಿ, ಮಕ್ಕಳು ಬರೆದ ಕವಿತೆಗಳನ್ನು, ಬಿಡಿಸಿದ ಚಿತ್ರಗಳನ್ನು, ರೂಪಿಸಿದ ಮಣ್ಣಿನ ಕಲಾಕೃತಿಗಳನ್ನು ಉದ್ಘಾಟಿಸಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಮೆಚ್ಚಿ ಮಾತನಾಡಿದ ಮಕ್ಕಳ ಲೇಖಕ ಸುಮುಖಾನಂದ ಜಲವಳ್ಳಿ, ಡಾ. ಇಸ್ಮಯಿಲ್ ತಲಖಣಿ ಸೊರಗುತ್ತಿರುವ ಸಾಂಪ್ರದಾಯಿಕ ಶಿಕ್ಷಣ ಕ್ರಮದಲ್ಲಿ ಆಗಬೇಕಾದ ಹೊಸ ಬದಲಾವಣೆಗಳು ಮತ್ತು ಇಂಥ ಶಿಬಿರದ ಅಗತ್ಯತೆಯನ್ನು ಒತ್ತಿ ಹೇಳಿದರು.
ಕನ್ನಡ ಮತ್ತು ಸಂಸ್ಕತಿ ಇಲಾಖೆ, ಕಾರವಾರ ಇವರ ನೆರವಿನೊಂದಿಗೆ ನಡೆದ ಕೊನೆ ದಿನದ ಕಲಾಪ್ರದರ್ಶನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ತಮ್ಮ ಮಕ್ಕಳು ಇಷ್ಟೊಂದು ಕ್ರಿಯಾಶೀಲರೇ ಎಂದು ಪಾಲಕರು ಹುಬ್ಬೇರಿಸುವಂತೆ ಇತ್ತು. ಪೂರ್ಣವಾಗಿ ಉಚಿತವಾಗಿಯೇ ನಡೆದ ಈ ಶಿಬಿರ ಮಕ್ಕಳ ನಡುವಿನ ಸಂಕೋಚ ಹೊರ ಹಾಕಿ ಅವರೊಳಗಿನ ಪ್ರತಿಭೆಯನ್ನು ಪ್ರಕಟಿಸುವಲ್ಲಿ ಯಶಸ್ವಿಯಾಯಿತು.
****************************

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s