‘ಮಠ, ಕಾರ್ಪೊರೇಟ್ ಸಂಸ್ಥೆ ಲೋಕಪಾಲ್ ವ್ಯಾಪ್ತಿಗೆ’

‘ಮಠ, ಕಾರ್ಪೊರೇಟ್ ಸಂಸ್ಥೆ ಲೋಕಪಾಲ್ ವ್ಯಾಪ್ತಿಗೆ’

ಮಂಗಳೂರು: ಲೋಕ್‌ಪಾಲ್ ಮಸೂದೆ ವ್ಯಾಪ್ತಿಗೆ ರಾಜಕಾರಣಿಗಳು ಮಾತ್ರವಲ್ಲದೇ ಮಠಮಾನ್ಯಗಳ ಧರ್ಮಗುರುಗಳು, ಸ್ವಾಮೀಜಿಗಳು ಮತ್ತು ಕಾರ್ಪೊರೇಟ್ ವಲಯವನ್ನೂ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಸುರೇಂದ್ರರಾವ್ ಆಗ್ರಹಿಸಿದರು.

ಧಾರಾವಾಡದಿಂದ ಹೊರಟಿರುವ ‘ಭ್ರಷ್ಟಾಚಾರ-ಬೆಲೆ ಏರಿಕೆ’ ವಿರುದ್ಧ ಸಮುದಾಯ ಸಾಂಸ್ಕೃತಿಕ ಜಾಥಾ ನಗರಕ್ಕೆ ಗುರುವಾರ ಆಗಮಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ 4 ಆಧಾರಸ್ತಂಭಗಳೂ ಅಲುಗಾಡುತ್ತಿವೆ, ಶಾಸಕರು, ಸಂಸದರು ಕೀಳುಮಟ್ಟಕ್ಕಿಳಿದಿದ್ದಾರೆ.ಕಾರ್ಯಾಂಗ ಕೊಳೆತು ನಾರುತ್ತಿದೆ. ನ್ಯಾಯಾಂಗ ಹಣ ಪಡೆದು ತೀರ್ಪು ನೀಡುತ್ತಿದೆ. ತೀಕ್ಷ್ಣ ಕಣ್ಣಿನಿಂದ ನೋಡುತ್ತಿದ್ದ ಮಾಧ್ಯಮವೂ ಭ್ರಷ್ಟವಾಗಿದೆ ಎಂದು ಕಿಡಿಕಾರಿದರು.

ಬೆಲೆ ಏರಿಕೆ ಜನರ ಬದುಕನ್ನು ಕಂಗೆಡಿಸಿದೆ, ಜನರ ಹಕ್ಕು ದಮನವಾಗುತ್ತಿವೆ, ಪ್ರಜಾಪ್ರಭುತ್ವದ ಮೇಲೆ ನಿರಂತರ ಹಲ್ಲೆ ನಡೆದರೆ ಜನತೆ ಸಹಿಸುವುದಿಲ್ಲ. ಭ್ರಷ್ಟಾಚಾರ ವ್ಯವಸ್ಥೆಯ ಗರ್ಭದೊಳಗೇ ಇದೆ, ಭ್ರಷ್ಟಾಚಾರ ನಿಯಂತ್ರಣವಾಗಬೇಕಾದರೆ ಆ ಗರ್ಭವನ್ನೇ ಕಿತ್ತುಹಾಕಬೇಕಿದೆ ಎಂದರು.

ನಾಟಕಕಾರ ವಿಜಯಕುಮಾರ್ ಕೊಡಿಯಾಲ್‌ಬೈಲ್, ಭ್ರಷ್ಟಾಚಾರ ವಿರುದ್ಧ ಅಣ್ಣಾ ಹಜಾರೆ ಹೋರಾಟ ದೇಶಾದ್ಯಂತ ಸಂಚಲನ ಮೂಡಿಸಿತು, ಭ್ರಷ್ಟಾಚಾರ ವಿರುದ್ಧ ಹೋರಾಟ ಹಜಾರೆ, ಸಂತೋಷ್ ಕುಮಾರ್ ಹೆಗ್ಡೆ ಅವರಿಂದಷ್ಟೇ ಅಸಾಧ್ಯ, ಪ್ರತಿಯೊಬ್ಬರು ಎಚ್ಚೆತ್ತಾಗ ಮಾತ್ರ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಾಧ್ಯ ಎಂದರು.

ಈ ಬಗ್ಗೆ ಜನಜಾಗೃತಿ ಮೂಡಿಸಲು ಮಾಧ್ಯಮವೂ ಕೆಲಸ ಮಾಡಬೇಕು. ಮಾಧ್ಯಮಗಳು ಒಂದೊಂದು ಪಕ್ಷ, ರಾಜಕಾರಣಿಗಳ ಹಿಡಿತದಲ್ಲಿರುವುದರಿಂದ ನಿಷ್ಪಕ್ಷಪಾತ ವರದಿಗಾರಿಕೆಗೆ ಅವಕಾಶವಿಲ್ಲದಂತಾಗಿದೆ, ಆದರೂ ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ಮಾಧ್ಯಮಗಳ ಪಾತ್ರ ಶ್ಲಾಘನೀಯ ಎಂದರು.

ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎರಿಕ್ ಒಝಾರಿಯೊ ಜಾಗಟೆ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯದ ಕಾರ್ಯದರ್ಶಿ ವಾಸದೇವ ಉಚ್ಚಿಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾಥಾ ಸಹ ಸಂಚಾಲಕ ಲಕ್ಷ್ಮಿ ನಾರಾಯಣ ಶಿವಮೊಗ್ಗ ಇದ್ದರು.

ಅನನ್ಯ ಸಂಗಾತಿ ತಂಡದಿಂದ ಜಾಗೃತಿ ಮೂಡಿಸುವ ‘ವಿಕ್ರಮಾದಿತ್ಯ-ಬೇತಾಳ’ ಬೀದಿ ನಾಟಕ ನಡೆಯಿತು. ಭಾಸ್ಕರ ನೆಲ್ಲಿತೀರ್ಥ ಸಂಗಡಿಗರು ಮತ್ತು ಬೆಳ್ತಂಗಡಿ ಸಮುದಾಯ ತಂಡ ಬಂಡಾಯಗೀತೆ ಗಾಯನ, ವ್ಯಂಗ್ಯಚಿತ್ರ ಪ್ರದರ್ಶನವಿತ್ತು. ಕಾರ್ಯಕ್ರಮದ ಕೊನೆಗೆ ಭ್ರಷ್ಟಾಚಾರ ವಿರುದ್ಧ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s