‘ಮಠಗಳು ಭ್ರಷ್ಟತೆಯ ಕೇಂದ್ರಗಳು’ – ಡಾ. ಮರುಳಸಿದ್ದಪ್ಪ

ವಾರ‍್ತಾ ಭಾರತಿ, ಮೇ ೨೯, ೨೦೧೧

http://varthabharathi.net/Benguluru/55461/

ಬೆಂಗಳೂರು, ಮೇ 28: ಇಂದು ಮಠಗಳು, ಆಶ್ರಮಗಳು ಮತ್ತು ಧ್ಯಾನಕೇಂದ್ರಗಳು ಭ್ರಷ್ಟತೆಯ ಕೇಂದ್ರಗಳಾಗುತ್ತಿವೆ ಎಂದು ಹಿರಿಯ ಚಿಂತಕ ಕೆ.ಮರುಳಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.  ನಗರದ ಸಂಸ ಬಯಲು ರಂಗಮಂದಿರದಲ್ಲಿಂದು ಸಮುದಾಯ ಹಮ್ಮಿಕೊಂಡಿದ್ದ ‘ಭ್ರಷ್ಟಾಚಾರ ಮತ್ತು ಬೆಲೆ ಏರಿಕೆ ವಿರುದ್ಧದ ಜಾಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣಕ್ಕಿಂತಲೂ ಎರಡು ಪಟ್ಟು ಹಣ ಮಠ, ಆಶ್ರಮ, ಧ್ಯಾನಕೇಂದ್ರಗಳಂತಹ ಧಾರ್ಮಿಕ ಕೇಂದ್ರಗಳಲ್ಲಿ ಕೊಳೆಯುತ್ತಾ ಬಿದ್ದಿದೆ. ಇಂದು ರಾಜಕೀಯ ನಾಯಕರು ತಮ್ಮ ಭ್ರಷ್ಟಾಚಾರದ ಹಣವನ್ನು ಮಠಗಳಲ್ಲಿ ಅಕ್ರಮವಾಗಿ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದರು.  ಜನತೆಯ ಆತ್ಮಗಳೇ ಇಂದು ಭ್ರಷ್ಟವಾಗುತ್ತಿವೆ. ಸಂತೋಷ ಹೆಗಡೆ, ಟಿ.ಎನ್.ಸೀತಾರಾಮ್‌ರಂತಹ ಪ್ರಾಮಾಣಿಕರು ಇಂದು ಚುನಾವಣೆಗಳಿಗೆ ಸ್ಪರ್ಧಿಸಿದರೆ ತಮ್ಮ ಠೇವಣಿಯನ್ನು ಕಳೆದುಕೊಳ್ಳುತ್ತಾರೆ. ಅಗತ್ಯಕ್ಕಿಂತ ಹೆಚ್ಚಿನ ಬೆಲೆಗೆ ಮಾರಲ್ಪಡುವ ಬೆಲೆ ಏರಿಕೆಯು ಕೂಡ ಭ್ರಷ್ಟಾಚಾರದ ಒಂದು ಮುಖ ಎಂದು ಅವರು ಆರೋಪಿಸಿದರು. ಗಣಿ ಕಳ್ಳತನದಿಂದ ಕೋಟ್ಯಂತರ ರೂ.ಗಳನ್ನು ಕೊಳ್ಳೆ ಹೊಡೆದು ತಿರುಪತಿ ತಿಮ್ಮಪ್ಪನಿಗೆ ಕೋಟಿ ರೂಪಾಯಿಯ ಬಂಗಾರದ ಕಿರಿಟ ಮಾಡಿಸುವ ಕಳ್ಳರು ಇಂದು ಜನರ ನಾಯಕಾರಾಗುತ್ತಿದ್ದಾರೆ. ಎಲ್ಲಿಂದಲೋ ಬಂದು ತನ್ನ ಭ್ರಷ್ಟ ಹಣದಿಂದ ಗುಡಿಯೊಂದನ್ನು ಕಟ್ಟಿದರೆ ಆತ ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಪಡೆಯುತ್ತಾನೆ ಎಂದು ಅವರು ವಿಷಾದಿಸಿದರು.
ಅಭಿವೃದ್ಧಿ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಖಾಸಗೀಕರಣ, ಜಾಗತೀಕರಣ, ಉದಾರೀಕರಣಗಳೆ ಲ್ಲವೂ ಕೊಳ್ಳೆ ಹೊಡೆಯುವ ಉಪಾಯಗಳು. ಇಂದು ಅಭಿವೃದ್ಧಿ ಎಂಬ ಪದಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ಪದವನ್ನು ಬಳಸಬಹುದು. ಅಭಿವೃದ್ಧಿ ಎಂದರೆ ಕೇವಲ ಅಂಬಾನಿಯಂಥವರು ಕೋಟಿಗಳನ್ನು ಖರ್ಚುಮಾಡಿ ಬಹುಮಹಡಿ ಕಟ್ಟಿಸುತ್ತಿರುವುದು ಎಂದು ಆರ್ಥಿಕ ವಿಶ್ಲೇಷಕರು ಅರ್ಥ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ಭ್ರಷ್ಟಾಚಾರ ಇಂದು ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದರ ಬಾಹುಗಳು ಖಾಸಗಿ ಕ್ಷೇತ್ರವನ್ನು ಆವರಿಸಿಕೊಂಡಿವೆ. ಜನರಿಗೆ ಇಂದು ಐಶ್ವರ್ಯ ಸಂಗ್ರಹಣೆಯ ಹುಚ್ಚು ಹಿಡಿದಿದ್ದು, ಕಾನೂನಿನ ಚೌಕಟ್ಟನ್ನು ಮೀರಿಯಾದರೂ ಸರಿ, ಅವರು ಧನವಂತರಾಗಲು ಬಯಸುತ್ತಿದ್ದಾರೆ ಎಂದರು.    ಬೆಲೆ ಏರಿಕೆ ವಿರುದ್ಧ ಆಹಾರ ದಾನ್ಯಗಳ ಉತ್ಪಾದಕ ರೈತನಿಗೆ ಲಾಭವಾಗುತ್ತಿಲ್ಲ.  ಆದರೆ ಮಧ್ಯವರ್ತಿಗಳು ಸಾಕಷ್ಟು ಹಣ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಸರಕಾರಿ ಗೋಡೌನ್‌ಗಳಲ್ಲಿ ಒಂದು ಕಡೆ ಆಹಾರ ಧಾನ್ಯಗಳು ಕೊಳೆಯುತ್ತಿದ್ದರೆ, ಇನ್ನೊಂದೆಡೆ ಬಡ ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಇನ್ನೊಂದೆಡೆ ಸ್ವ-ಲಾಭಕ್ಕಾಗಿ ರಾಜಕಾರಣಿಗಳು ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದುಮಾಡಿಕೊಳ್ಳುತ್ತಿದ್ದಾರೆ ಇದನ್ನೆಲ್ಲಾ ನೊಡಿದರೆ ರಾಜಕೀಯದಲ್ಲಿ ಮಾನವೀಯತೆ ಮಾಯವಾಗುತ್ತಿದೆ ಎಂದು ದೂರಿದರು.

ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಚಿಂತಕ ಜಿ.ಕೆ.ಗೋವಿಂದರಾವ್ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸಮುದಾಯದ ಅಧ್ಯಕ್ಷ ಆರ್.ಕೆ.ಹುಡುಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಅಣ್ಣಾ ಸುತ್ತ ಭ್ರಷ್ಟ ಸೇವಾ ಸಂಸ್ಥೆಗಳು

ಇಂದು ಸೇವೆಯ ಹೆಸರಿನಲ್ಲಿ ಕಾರ್ಯನಿರತವಾಗಿರುವ ಸೇವಾ ಸಂಸ್ಥೆಗಳು ಭ್ರಷ್ಟತೆಯ ತಾಣಗಳಾಗುತ್ತಿವೆ. ಅಣ್ಣಾ ಹಝಾರೆ ಸುತ್ತ ನೆರೆದಿರುವ ಸೇವಾಸಂಸ್ಥೆಗಳ ಮೇಲೆ ಕೂಡ ಒಂದು ಕಣ್ಣಿಡಬೇಕಿದೆ. ಏಕೆಂದರೆ ಈಗಾಗಲೇ ಅವರ ಸುತ್ತ ಇರುವ ಕೆಲವು ಸಂಸ್ಥೆಗಳ ಮುಖಂಡರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಆದರೆ ಅಣ್ಣಾ ಹಝಾರೆ ಅವರ ವ್ಯಕ್ತಿತ್ವವನ್ನು ಅನುಮಾನದಿಂದ ನೋಡುವ ಅಗತ್ಯವಿಲ್ಲ ಎಂದು ಕೆ. ಮರುಳಸಿದ್ದಪ್ಪ ಹೇಳಿದರು. ನಾಡಿನ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಣ್ಣಾ ಹಝಾರೆಯವರನ್ನು ಭೇಟಿ ಮಾಡಲು ಹೋದಾಗ ಅವರ ಸುತ್ತ ನೆರೆದಿರುವ ಜನ ಹಝಾರೆಯವರನ್ನು ಭೇಟಿ ಮಾಡಲು ಅವಕಾಶ ನೀಡಿಲ್ಲ. ಇದು ಬಹಳ ಅಪಾಯಕಾರಿ ಎಂದು ಅವರು ಹೇಳಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s