ಅಗಲಿದ ಲಿಂಗ ದೇವರು ಹಳೆಮನೆ ಯವರಿಗೆ ಸಮುದಾಯದ ಶ್ರದ್ದಾಂಜಲಿ

ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ತೀವ್ರ ಹೃದಯಾಘಾತದಿಂದ ದಿನಾಂಕ 08-06-2011 ರಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ.
ಖ್ಯಾತ ರಂಗಕರ್ಮಿ, ವಿಮರ್ಶಕ, ಪ್ರಗತಿಪರ ಚಿಂತಕ, ಲಿಂಗದೇವರು ಹಳೆಮನೆಯವರ ಅಕಾಲಿಕ ಮರಣಕ್ಕೆ ಸಮುದಾಯ ರಾಜ್ಯ ಸಮಿತಿಯು ತೀವ್ರ ಶೋಕ ವ್ಯಕ್ತಪಡಿಸುತ್ತದೆ.

ಸಮುದಾಯ ಸಾಂಸ್ಕ್ರತಿಕ ಸಂಘಟನೆ ಯ ಮಾಜಿ ರಾಜ್ಯ ಉಪಾಧ್ಯಕ್ಷರು ಮತ್ತು ಮೈಸೂರು ಘಟಕದ ಅಧ್ಯಕ್ಷರೂ ಆಗಿದ್ದ ಹಳೆಮನೆಯವರು ಸಮುದಾಯ 70ರ ದಶಕದಲ್ಲಿ ನಡೆಸಿದ ಜಾಥಾದಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ನಂತರದ ದಿನಗಳಲ್ಲಿಯೂ ಸಮುದಾಯದ ಎಲ್ಲ ಚಟುವಟಿಕೆಗಳ ಜೊತೆ ಇದ್ದು ಮಾರ್ಗದರ್ಶನ ಮಾಡುತ್ತಿದ್ದವರು. ಅವರ ನಿಧನದಿಂದ ಸಾಂಸ್ಕ್ರತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡದ ಸಾರಸ್ವತ ಮತ್ತು ಸಾಂಸ್ಕ್ರತಿಕ ಲೋಕಕ್ಕೆ ಅವರ ಕೊಡುಗೆಯನ್ನು ಸಮುದಾಯ ಸದಾ ಸ್ಮರಿಸುತ್ತದೆ.

ಟಿ.ಸುರೇಂದ್ರ ರಾವ್.
ಪ್ರಧಾನ ಕಾರ್ಯದರ್ಶಿ

ಸಮುದಾಯದ ಇತ್ತೀಚಿನ  ಕಾರ್ಯಕ್ರಮಗಳಲ್ಲಿ ಲಿಂಗದೇವರು

ಸಮುಧಾಯ ಈ ವರ್ಷ ನಡೆಸಿದ ಟ್ಯಾಗೋರ್ ೧೫೦ ಉತ್ಸವದಲ್ಲಿ ಪ್ರೊ. ಲಿಂಗದೇವರು ’ಗಾಂಧೀಜಿ-ಟ್ಯಾಗೋರ್ ಸಂವಾದ’ ಬಗ್ಗೆ ವಿಚಾರ ಸಂಕಿರಣದ ಅದ್ಯಕ್ಷತೆ ವಹಿಸಿದ್ದರು

 

 

 

 

 

 

 

 

ಸಮುದಾಯ ೨೦೦೯ ರಲ್ಲಿ “ಹಸಿವು ಮುಕ್ತ ಕರ‍್ನಾಟಕ್ಕಾಗಿ ಜಾಥಾ” ದ ಭಾಗವಾಗಿ ನಡೆಸಿದ “ಹಸಿವು ಮತ್ತು ಲಾಭ- ಒಂದು ಸಾಂಸ್ಕೃತಿಕ ಸ್ಪಂದನೆ” ವಿಚಾರ ಸಂಕಿರಣದಲ್ಲಿ ಪುಸ್ತಕ ಬಿಡುಗಡೆಯಲ್ಲಿ ಮತ್ತು ಒಬ್ಬ ಭಾಷಣಕಾರರಾಗಿ ಲಿಂಗದೇವರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s