ಜನಸಂಸ್ಕೃತಿ ಪರಿಕಲ್ಪನೆಯ ನಿರ್ವಚನೆಗೆ ಕಾರ್ಯಾಗಾರ

ಹಿನ್ನೆಲೆ- ಉದ್ದೇಶ

’ಜನಸಂಸ್ಕೃತಿ ಉಳಿಸಿ, ಬೆಳೆಸಿ’ ಎಂಬ ಪ್ರಗತಿಪರ ಸಾಂಸ್ಕೃತಿಕ ಚಳುವಳಿಗಳ ಪ್ರಧಾನ ಆಶಯವನ್ನು ವಿಷದ ಪಡಿಸಲು, ಅದು ಪ್ರಮುಖ ಚಟುವಟಿಕೆ-ಕಾರ್ಯಕ್ರಮಗಳಿಗೆ ದಾರಿದೀಪವಾಗಲು ಅದರ ನಿಖರವಾದ ನಿರ್ವಚನೆ ಅಗತ್ಯ

  • ಕನ್ನಡ, ಜಾನಪದ, ಜನ-ಪರ, ಜನಪ್ರಿಯ, ಬುಡಮಟ್ಟದ ಸಂಸ್ಕೃತಿ, ಬಹು-ಸಂಸ್ಕೃತಿ, ಉಪ-ಸಂಸ್ಕೃತಿ, ಬುಡಕಟ್ಟು, ದ್ರಾವಿq, ಗ್ರಾಮೀಣ, ತಳಮೂಲ ಸಂಸ್ಕೃತಿ ಎಂಬ ಹಲವು ಪರಿಕಲ್ಪನೆಗಳ ಮಧ್ಯೆ, ಅದಕ್ಕಿಂತ ಭಿನ್ನವಾದ ಸಮಗ್ರವಾದ ’ಜನಸಂಸ್ಕೃತಿ’ಯ ನಿರ್ದಿಷ್ಟ ನಿರ್ವಚನೆಯ ಅಗತ್ಯ ಇದೆ
  • ಸಾಹಿತ್ಯ, ನಾಟಕ ನೃತ್ಯ ಮುಂತಾದ ’ಪ್ರದರ್ಶನ ಕಲೆ”ಗಳು, ಚಿತ್ರಕಲೆ, ಸಂಗೀತ, ಸಿನಿಮಾ, ರೇಡಿಯೋ-ಟಿವಿ ಮುಂತಾದ ಮಾಧ್ಯಮಗಳು  – ಮುಂತಾದ ಎಲ್ಲಾ ಸಾಂಸ್ಕೃತಿಕ ಕ್ಷೇತ್ರಗಳಿಗೂ ಅನ್ವಯವಾಗುವ ಮತ್ತು ಪ್ರಸ್ತುತವಾದ ’ಜನಸಂಸ್ಕೃತಿ’ಯ ಪರಿಕಲ್ಪನೆ ರೂಪಿಸುವುದು
  • ಜನಸಂಸ್ಕೃತಿಯ ಮೇಲೆ ಆಳುವ ಸಂಸ್ಕೃತಿ ಕಾಲದಿಂದ ಕಾಲಕ್ಕೆ ನಡೆಸಿದ ದಾಳಿಯ ಸ್ವರೂಪ ಗುರುತಿಸುವುದು.
  • ಜನಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಮಾರಕವಾಗುವ ಸಿಧ್ಧಾಂತಗಳು, ಶಕ್ತಿಗಳು ಮತ್ತು ಅಂಶಗಳನ್ನು ಗುರುತಿಸುವುದು.
  • ಕಾರ್ಯಾಗಾರ ರೂಪಿಸಿದ ’ಜನ-ಸಂಸ್ಕೃತಿ’ ರೂಪುರೇಷೆಗಳ ನಿರ್ವಚನೆಗೆ ಪ್ರಗತಿಪರ ಸಾಂಸ್ಕೃತಿಕ ವಲಯದಲ್ಲಿ ಸಾರ್ವತ್ರಿಕ ಸಹಮತ ದೊರಕುವಂತೆ ಮಾಡುವುದು

ವಿಧಾನ

  • ಜನಸಂಸ್ಕೃತಿಯ ನಿರ್ವಚನೆಗೆ ಸಹಕಾರಿಯಾದ ಸಂಪನ್ಮೂಲ ಒದಗಿಸಬಲ್ಲ – ಸಾಂಸ್ಕೃತಿಕ ಅಧ್ಯಯನ ಮಾಡಿರುವ ಪರಿಣತರು, ಪ್ರಗತಿಪರ ಚಿಂತಕರು, ವಿವಿಧ ಸಾಂಸ್ಕೃತಿಕ ಕ್ಷೇತ್ರಗಳ ಪರಿಣತರು, ಪ್ರಗತಿಪರ ಚಳುವಳಿಯ ನಾಯಕರು/ಕಾರ್ಯಕರ್ತರು – ಇವರುಗಳ ಜತೆ ಸಂವಾದ (ಕಾರ್ಯಾಗಾರದಲ್ಲೂ, ಅದಕ್ಕಿಂತ ಮೊದಲು ಮತ್ತು ಹೊರಗೂ)
  • ’ಜನ-ಸಂಸ್ಕೃತಿ’ ಯ ಹಲವು ಆಯಾಮಗಳ ಬಗ್ಗೆ ಪರಿಣತರಿಂದ ಪ್ರಬಂಧಗಳನ್ನೊಳಗೊಂಡ ವಿಚಾರ ಸಂಕಿರಣ
  • ’ಜನ-ಸಂಸ್ಕೃತಿ’ ಯ ಪ್ರಮುಖ ಆಯಾಮಗಳ ಬಗ್ಗೆ ಒಂದು ಪ್ರಶ್ನಾವಳಿ ರಚಿಸಿ, ಅದಕ್ಕೆ ಪ್ರತಿಕ್ರಿಯೆ ಸಂಗ್ರಹ
  • ಈ ಪ್ರಶ್ನಾವಳಿಗೆ ಉತ್ತರ ಕಂಡುಕೊಳ್ಳುತ್ತಾ, ’ಜನ-ಸಂಸ್ಕೃತಿ’ ಯ ನಿರ್ವಚನೆ ಮಾಡುವ ಒಂದು ಕರಡು ಹೇಳಿಕೆಯ ಮಂಡನೆ ಮತ್ತು ಚರ್ಚೆ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s