ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಬೋಲ್ಕರ್ ಹತ್ಯೆ

ಮೂಢನಂಬಿಕೆಗಳ ವಿರೋಧಿ ಹೋರಾಟಗಾರ ಡಾ. ನರೇಂದ್ರ ದಾಬೋಲ್ಕರ್ ಹತ್ಯೆ

ಸಾರ್ವಜನಿಕ ಶ್ರಧ್ಧಾಂಜಲಿ ಸಭೆ

ಆಗಸ್ಟ್ ೨೧, ೨೦೧೩ ಸಂಜೆ .೩೦ ಬೆಂಗಳೂರು

 ನೀವು ಹೂವುಗಳನ್ನು ಕಿತ್ತುಹಾಕಬಹುದು. ಆದರೆ ಮತ್ತೆ ಹೂವು ಚಿಗುರುವ ವಸಂತವನ್ನಲ್ಲ.

ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ ಅವರು ಬಿತ್ತಿದ ಯೋಚನೆಗಳನ್ನು ಕೊಲ್ಲಲಾಗದು.

ಚೆ ಗವೆರಾ

      ಪುಣೆಯಲ್ಲಿ ಹಾಡು ಹಗಲಲ್ಲೇ ಡಾ. ನರೇಂದ್ರ ದಾಬೋಲ್ಕರ್ ಕೊಲೆ ಮಾಡಲಾಗಿದೆ. ಪುಣೆಯ ಪ್ರಸಿದ್ಧ ಶನಿವಾರ ಪೇಟೆಯ ಹತ್ತಿರದ ಓಂಕಾರೇಶ್ವರ ಸೇತುವೆ ಬಳಿ ಇಬ್ಬರು ಯುವಕರು ಮೋಟಾರ್ ಸೈಕಲಿನ ಮೇಲೆ ಬಂದು ಹತ್ತಿರದಿಂದ ಗುಂಡಿಟ್ಟು ಹೊಂದಿದ್ದಾರೆ. ಮೂಢನಂಬಿಕೆಗಳ ವಿರುದ್ಧ ಹೋರಾಟಕ್ಕೆ ೧೯೮೦ರ ದಶಕದಿಂದಲೇ ತಮ್ಮ ಜೀವನವನ್ನು ಮುಡಿಪಾಗಿಸಿದ್ದ ಡಾ. ದಾಬೋಲ್ಕರ್ ಅವರ ಕೊಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳ ವಿರುದ್ಧ ಚಳುವಳಿಯ ಮಂಚೂಣಿಯಲ್ಲಿದ್ದ ೬೮ ವರ್ಷದ ಡಾ. ದಾಬೋಲ್ಕರ್ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿ ಸ್ಥಾಪಕರಾಗಿದ್ದರು.

      ಸತಾರಾದಲ್ಲಿ ದೊಡ್ಡ ಕುಟುಂಬದಲ್ಲಿ ಜನಿಸಿದ ದಾಬೋಲ್ಕರ್ ವೃತ್ತಿಯಲ್ಲಿ ವೈದ್ಯರಾಗಿದ್ದು ಒಂದು ದಶಕದ ಕಾಲ ವೈದ್ಯಕಿಯ ಸೇವೆಯ ನಂತರ ಸಾಮಾಜಿಕ ಸೇವೆಗೆ ತಮ್ನನ್ನು ತೊಡಗಿಸಿಕೊಂಡರು. ಮೊದಲಿಗೆ ಅವರು ಬಾಬಾ ಅದವ್ ಅವರಒಂದು ಹಳ್ಳಿ ಒಂದು ಬಾವಿಎಂಬ ಸಾಮಾಜಿಕ ನ್ಯಾಯದ ಚಳುವಳಿಯಲ್ಲಿ ಕೆಲಸ ಮಾಡಿದರು. ೧೯೮೩ರ ಹೊತ್ತಿಗೆ ವಿವಿಧ ರೋಗಗಳಿಗೆದಿವ್ಯ ಔಷಧಿಗಳನ್ನು ಕೊಟ್ಟು ಗುಣ ಮಾಡುತ್ತೇವೆ ಎಂದು ಮೋಸ ಮಾಡುವ ತಾಂತ್ರಿಕರು ಮತ್ತುದೇವ ಮಾನವರನ್ನು ಬಯಲಿಗೆಳೆಯುವ ಚಳುವಳಿ ಆರಂಭಿಸಿದರು. ೧೯೮೯ರ ಹೊತ್ತಿಗೆ ಅದಕ್ಕೊಂದು ಸಂಘಟನಾ ಸ್ವರೂಪ ಕೊಟ್ಟುಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಸ್ಥಾಪಿಸಿದರು.

     ಅವರ ಚಳುವಳಿ ಸ್ವಾಭಾವಿಕವಾಗಿಯೇ ಸಾಮಾಜಿಕವಾಗಿ ರಾಜಕೀಯವಾಗಿ ಪ್ರಬಲರಾಗಿದ್ದದೇವ ಮಾನವರನ್ನು ಕೆರಳಿಸಿದ್ದು, ಯಾವಾಗಲೂ ಬೆದರಿಕೆಗಳಡಿಯಲ್ಲೇ ತಮ್ಮ ಕೆಲಸ ಮುಂದುವರೆಸಿದರು. ನರೇಂದ್ರ ಮಹಾರಾಜ್ ಮತ್ತು ನಿರ್ಮಲಾ ದೇವಿ ಎಂಬದೇವ ಮಾನವ ವಿರುದ್ಧ ಅವರ ಚಳುವಳಿಯಲ್ಲಿ, ಅವರು ಮತ್ತು ಅವರ ಸಂಘಟನೆಯ ಸದಸ್ಯರು ಸಾವಿರಾರುಭಕ್ತರನ್ನು ಎದುರಿಸಬೇಕಾಯಿತು. ಅಹ್ಮದ್ ನಗರದ ಶನಿ ಶಿಗ್ನಾಪುರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಚಳುವಳಿ, ಅವರು ಸಂಘಟಿಸಿದ ದೊಡ್ಡ ಚಳುವಳಿಗಳಲ್ಲಿ ಒಂದಾಗಿತ್ತು.

     ಅವರ ಚಳುವಳಿ ವಿರುದ್ಧ ಬೆದರಿಕೆಗಳು ಹಿಂಸಾತ್ಮಕ ದಾಳಿಗಳು ಹೊಸತಲ್ಲ. ಜನತೆಯಲ್ಲಿ ಮೂಡನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಕಪಟ ಧಾರ್ಮಿಕ ಸಂಘಟನೆಗಳಲ್ಲದೆ, ಹಲವು ಬಲ ಪಂಥೀಯ ಸಂಘಟನೆಗಳು ಅವರ ಚಳುವಳಿಯನ್ನು ದುರ್ಬಲಗೊಳಿಸಲು ಸದಾ ಪ್ರಯತ್ನಿಸುತ್ತಿದ್ದವು. ಧಾರ್ಮಿಕ ಆಚರಣೆ, ಸಂಪ್ರದಾಯಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ ಎಂಬ ಆರೋಪ ಮಾಡಿ ಅವರನ್ನು ವಿರೋಧಿಸುತ್ತಿದ್ದವು. ಅವರ ಯಾವ ಪತ್ರಿಕಾ ಗೋಷ್ಟಿ ಸಹ ಇಂತಹ ಸಂಘಟನೆಗಳ ಬುಡಮೇಲು ಚಟುವಟಿಕೆ ಇಲ್ಲದೆ ನಡೆಯುತ್ತಿರಲಿಲ್ಲ.

     ಕಳೆದ ಕೆಲವು ವರ್ಷಗಳಿಂದ ಅವರು ತಯಾರಿಸಿಮಂತ್ರತಂತ್ರಗಳ ಮತ್ತು ಮೂಢನಂಬಿಕೆಗಳ ವಿರುದ್ಧಮಸೂದೆಯೊಂದರ ಕರಡು ಮಹಾರಾಷ್ಟ್ರ ವಿಧಾನಸಭೆಯ ಮುಂದೆ ಇದೆ. ವಿಧಾನಸಭೆಯ ಕಳೆದ ಏಳು ಅಧಿವೇಶನಗಳಿಂದ ಅದರ ಮೇಲೆ  ಯಾವುದೇ ಚರ್ಚೆ ಇಲ್ಲದೆ ಅಲ್ಲೇ ಬಿದ್ದಿದೆ. ಮಸೂದೆಯನ್ನು ಪಾಸು ಮಾಡಿಸಿ ಕಾನೂನು ಮಾಡುವುದು ಡಾ. ದಾಬೋಲ್ಕರ್ ಅವರ ಕನಸುಗಳಲ್ಲಿ ಒಂದಾಗಿತ್ತು. ಅದಕ್ಕಾಗಿ ಅವರು ವ್ಯಾಪಕ ಪ್ರಚಾರ ನಡೆಸಿದ್ದರು. ಸ್ವಾಭಾವಿಕವಾಗಿಯೇ ಮೇಲೆ ಹೇಳಿದ ಸಂಘಟನೆಗಳು ಮತ್ತು ಪಕ್ಷಗಳು ಅವರ ಮಸೂದೆಯನ್ನೂ ಬಲವಾಗಿ ವಿರೋಧಿಸುತ್ತಿದ್ದವು.

Anti-superstition-activist-Narendra-Dabholkar

     ಭಾರತದ ಹಲವು ಪ್ರಾಂತ್ಯಗಳಲ್ಲಿ ಮೂಢನಂಬಿಕೆಯ ವಿರುದ್ಧ ಹೋರಾಟ ಮಾಡುತ್ತಿರುವ ಡಾ.ದಾಬೋಲ್ಕರ್ ರಂತಹ ವ್ಯಕ್ತಿಗಳಿಗೆ ತೀವ್ರ ಬೆದರಿಕೆ ಒಡ್ಡಲಾಗಿದೆ. ಅವರಂತೆ ಹಲವರನ್ನು ಸದಾ ಕಾಲಕ್ಕೆ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಗಿದೆ. ಮೂಢನಂಬಿಕೆಯ ವಿರುದ್ಧ ಹೋರಾಟಕ್ಕೂ ಚಾರ್ವಾಕನಿಂದ ಹಿಡಿದು ಅದರದೇ ಆದ ದೀರ್ಘ ಸಂಪ್ರದಾಯ ಇದೆ. ಕರ್ನಾಟಕದಲ್ಲೂ ೧೨ನೇ ಶತಮಾನದ ಶರಣರಿಂದ ಪ್ರಾರಂಭಿಸಿ ದಾಸರು, ಸೂಫಿಗಳು, ಸಮಾಜಸುಧಾಕರು ಹಾಗೂ ಕಳೆದ ದಶಕಗಳಿಂದ ಸಕ್ರಿಯವಾಗಿರುವ ಹಲವು ಚಳುವಳಿಗಳು ಇಂತಹ ದೀರ್ಘ ಸಂಪ್ರದಾಯದ ಭಾಗವಾಗಿದ್ದು ಬೆದರಿಕೆ ಎದುರಿಸುತ್ತಿವೆ.

     ಮೂಢನಂಬಿಕೆಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ರೂಢಿಸುವುದು ಸರ್ಕಾರದ ಕರ್ತವ್ಯ ಎಂಬ ಸಂವಿಧಾನದ ಆಶಯವನ್ನು ನಮ್ಮ ದೇಶದ ಕೇಂದ್ರರಾಜ್ಯ ಸರ್ಕಾರಗಳು ಲೆಕ್ಕಿಸಿಲ್ಲ. ಮಾತ್ರವಲ್ಲ, ಆಶಯವನ್ನು ಜಾರಿ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲಿನ ದಾಳಿಯ ವಿರುದ್ಧ ಕಿರುಬೆರಳನ್ನೂ ಎತ್ತಿಲ್ಲಬದಲಾಗಿ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ಮೇಲೆಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕೆ‘, ‘ಸಮುದಾಯಗಳ ನಡುವೆ ಸಾಮರಸ್ಯ ಕೆಡಿಸಿದ್ದಕ್ಕೆಕಾನೂನು ಕ್ರಮ ಜರುಗಿಸಿದ್ದೂ ಇದೆ. ಇತ್ತೀಚೆಗೆಪವಾಡ ರಹಸ್ಯ ಬಯಲುಕಾರ್ಯಕ್ರಮ ನಡೆಸಿದ ಕಾರ್ಯಕರ್ತರ ಬಂಧನ ಇಂತಹ ಒಂದು ಉದಾಹರಣೆ. ಇಂದಿನ ಆಳುವವರಿಗೆ ಅವರ ನೀತಿಗಳಿಂದ ಬಾಧಿತರಾದ ಆಕ್ರೋಶಕ್ಕೊಳಗಾದ ಜನ ಇಂತಹ ಮೂಢನಂಬಿಕೆಗಳಿಗೆದೇವತಾ ಮಾನವರಿಗೆ ಶರಣು ಹೋಗುವುದು ಬೇಕಾಗಿದೆ. ಅವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡರೆ ತಮ್ಮ ನೀತಿಗಳ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕ ಅವರಿಗೆ ಸದಾ ಇರುತ್ತದೆ.

     ಆದರೆ  ಮೂಢನಂಬಿಕೆಯ ವಿರುದ್ಧ ಹೋರಾಟ ನಿಂತಿಲ್ಲ. ನಿಲ್ಲುವುದು ಇಲ್ಲ. ಚಳುವಳಿ ಸತ್ತಿಲ್ಲ. ಸಾಯುವುದು ಇಲ್ಲ. ಡಾ. ದಾಬೋಲ್ಕರ್ ಅವರ ಬಲಿದಾನ ವ್ಯರ್ಥವಾಗಬಾರದು. ಅವರ ಆಶಯಗಳನ್ನು ನಾವು ಮುಂದುವರೆಸೋಣ.

ನಾವು ಮಹಾರಾಷ್ಟ್ರ ಸರ್ಕಾರಕ್ಕೆ ಕೆಳಗಿನ ಹಕ್ಕೊತ್ತಾಯ ಮಂಡಿಸುತ್ತೇವೆ:

– ತಕ್ಷಣವೇ ತನಿಖೆ ನಡೆಸಿ ಅವರ ಕೊಲೆಗಡುಕರನ್ನು ಬಂಧಿಸಬೇಕು. ಅವರ ಕೊಲೆಯ ಹಿಂದಿರುವ ಕರಾಳ ಶಕ್ತಿಗಳನ್ನು ಬಯಲಿಗೆ ತರಬೇಕು!

– ಡಾ.ದಾಬೋಲ್ಕರ್ ಅವರಿಗೆ ಶ್ರದ್ದಾಂಜಲಿಯಾಗಿ ಅವರು ಸಿದ್ಧ ಪಡಿಸಿದ ಮತ್ತು ವಿಧಾನ ಸಭೆಯ ಮುಂದಿರುವಮೂಢನಂಬಿಕೆಗಳ ವಿರುದ್ಧ ಮಸೂದೆಯನ್ನು ಚರ್ಚೆಗೆ ಎತ್ತಿಕೊಂಡು ಕಾನೂನು ಮಾಡಬೇಕು!

ನಾವು ಕೆಳಗಿನ ಪ್ರತಿಜ್ಞೆ ಮಾಡುತ್ತೇವೆ:

– ಕರ್ನಾಟಕದಲ್ಲೂ ಡಾ.ದಾಬೋಲ್ಕರ್ ರೂಪಿಸಿದ ಮಾದರಿಯ ಕಾನೂನು ಜಾರಿಗೆ ಬರುವಂತೆ ಚಳುವಳಿ ರೂಪಿಸುತ್ತೇವೆ.!

– ಎಲ್ಲಾ ರೀತಿಯ ಮೂಢನಂಬಿಕೆಗಳ ವಿರುದ್ಧ ಹೋರಾಟ ಚಳುವಳಿಗಳನ್ನು ತೀವ್ರ ಗೊಳಿಸುತ್ತೇವೆ!

– ಮೂಢನಂಬಿಕೆಗಳಿಗೆ ಕುಮ್ಮಕ್ಕು ಕೊಡುವ ಕರಾಳ ಶಕ್ತಿಗಳನ್ನು ಬಯಲಿಗೆಳೆದು, ಅವರ ಕರಾಮತ್ತುಗಳಿಗೆ ಪ್ರತಿರೋಧ ಒಡ್ಡುತ್ತೇವೆ!

ಡಾ.ದಾಬೋಲ್ಕರ್ ! ಇದೋ ನಿಮಗಿದು ನಮ್ಮ ಶ್ರದ್ಧಾಂಜಲಿ !!

–    ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

–    ಸಮುದಾಯ, ಕರ್ನಾಟಕ

–    ಕರ್ನಾಟಕ ವಿಚಾರವಾದಿಗಳ ಸಂಘ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s