ಕುಂದಾಪುರದಲ್ಲಿ ಬಯಲು – ಪವಾಡ ರಹಸ್ಯ ಬಯಲು 29 ¸ಸೆಪ್ಟಂಬರ್

ನೀವು ಹೂವುಗಳನ್ನು ಕಿತ್ತುಹಾಕಬಹುದು. ಆದರೆ, ಮತ್ತೆ ಹೂ ಕೊಡುವ ವಸಂತವನ್ನಲ್ಲ. ವ್ಯಕ್ತಿಗಳನ್ನು ಕೊಲ್ಲಬಹುದು. ಆದರೆ, ಅವರು ಬಿತ್ತಿದ ಯೋಚನೆಗಳನ್ನಲ್ಲ

. -ಚೆ ಗವೆರಾ

http://samudaya.kundapura.org/2013/09/Bayalu-Program.html

 

**** ಡಾ.ನರೇಂದ್ರ ದಾಬೋಲ್ಕರ್

ಡಾ.ನರೇಂದ್ರ ದಾಬೋಲ್ಕರ್-ಸತಾರದಲ್ಲಿ ದೊಡ್ಡ ಕುಟುಂಬದಲ್ಲಿ ಜನಿಸಿದ ದಾಬೋಲ್ಕರ್ ವೃತ್ತಿಯಲ್ಲಿ ವೈದ್ಯರಾಗಿದ್ದು ಒಂದು ದಶಕದ ಕಾಲ ವೈದ್ಯಕೀಯ ಸೇವೆ ಸಲ್ಲಿಸಿದ್ದರು.ನಂತರ,ತಮ್ಮನ್ನು ಸಾಮಾಜಿಕ ಸೇªವೆಯಲ್ಲಿ ತೊಡಗಿಸಿಕೊಂಡರು. ಮೊದಲು,ಬಾಬಾ ಆದವ್ ರ `ಒಂದು ಹಳ್ಳಿ ಒಂದು ಬಾವಿ` ಎಂಬ ಸಾಮಾಜಿಕ ನ್ಯಾಯದ ಚಳುವಳಿಯಲ್ಲಿ ಕೆಲಸ ಮಾಡಿದರು.1983 ರ ಹೊತ್ತಿಗೆ ವಿವಿಧ ರೋಗಗಳಿಗೆ ದಿವ್ಯ ಔಷದಿ ಕೊಡುತ್ತೇವೆ ಎಂದು ಮೋಸಮಾಡುವ ತಾಂತ್ರಿಕರು ಮತ್ತು ಸ್ವಯಂಘೋಷಿತ ದೇವಮಾನವರನ್ನು ಬಯಲಿಗೆಳೆಯುವ ಚಳುವಳಿ ಆರಂಭಿಸಿದರು. 1989ರ ಹೊತ್ತಿಗೆ ತಮ್ಮ ಚಳುವಳಿಗೆ ಸಂಘಟನಾ ಸ್ವರೂಪವನ್ನು ನೀಡಿ `ಮಹಾರಾಷ್ಟ್ರಾ ಅಂಧಶ್ರದ್ಧಾ ನಿರ್ಮೂಲನ ಸಮಿತಿ` ಸ್ಥಾಪಿಸಿದರು. ದಾಬೋಲ್ಕರರ ಚಳುವಳಿ ಸ್ವಾಭಾವಿಕವಾಗಿಯೇ ಸ್ವಯಂಘೋಷಿತ ದೇವಮಾನವರನ್ನು ಕೆರಳಿಸಿತು.ಇಂತಹ ದೇವಮಾನವರು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಭಾವಿಗಳಾಗಿದ್ದುದರಿಂದ ದಾಬೋಲ್ಕರರು ಬೆದರಿಕೆಗಳಡಿಯಲ್ಲೇ ತಮ್ಮ ಚಳುವಳಿಯನ್ನು ಮುಂದುವರಿಸಬೇಕಾಯಿತು. ನರೇಂದ್ರ ಮಹಾರಾಜ್ ಮತ್ತು ನಿರ್ಮಲಾದೇವಿ ಎಂಬ `ದೇವಮಾನವ` ರ ವಿರುದ್ಧ ಚಳುವಳಿಯಲ್ಲಿ ಮಹರಾಷ್ಟ್ರ ಅಂಧಶ್ರದ್ಧಾ ಸಮಿತಿ ಸಾವಿರಾರು `ಭಕ್ತ`ರನ್ನು ಎದುರಿಸಬೇಕಾಯಿತು.ಅಹ್ಮದ್ ನಗರದ ಶನಿ ಶಿಗ್ನಾಪುರ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಚಳುವಳಿ, ಡಾ. ದಾಬೋಲ್ಕರ್ ಸಂಘಟಿಸಿದ ದೊಡ್ಡ ಚಳುವಳಿಗಳಲ್ಲೊಂದು. ಭಾರತದ ಸಂವಿಧಾನಕ್ಕೆ ಉನ್ನತವಾದ ಗೌರವಗಳನ್ನು ನೀಡುತ್ತಿದ್ದ ದಾಬೋಲ್ಕರರು, ತಮ್ಮೆಲ್ಲ ಹೋರಾಟ-ಚಳುವಳಿಗಳನ್ನು ಜಾರಿಯಲ್ಲಿರುವ ನೀತಿ ನಿಯಮಗಳಿಗೆ ಬದ್ಧವಾಗಿಯೇ ಸಂಘಟಿಸುತ್ತಿದ್ದರು. ಸ್ದತಃ,ನಾಸ್ತಿಕರು ಮತ್ತು ಯಾವುದೇ ದಾರ್ಮಿಕಗುರುತುಗಳನ್ನು ಹೊಂದಿಲ್ಲದವರಾಗಿದ್ದರೂ, ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ಮತ್ತು ಬೇರೆ ಬೇರೆ ದೇವರಲ್ಲಿ ನಂಬಿಕೆ ಇಟ್ಟುಕೊಳ್ಳುವÀ ಜನರ ಬಗ್ಗೆ ಅವರ ಆಕ್ಷೇಪವಿರಲಿಲ್ಲ. ದೇವರು ಮತ್ತು ಧರ್ಮಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರಿಗೂ ಅವರದೇ ನಂಬಿಕೆಗಳನ್ನು ಅನುಸರಿಸಲು ಸ್ವಾತಂತ್ರ್ಯವಿದೆ ಎಂದು ಅವರು ಭಾವಿಸಿದ್ದರು. ಆದುದರಿಂದಲೇ, ಮಹಾರಾಷ್ಟ್ರದಲ್ಲಿ ಅವರೇ ಸಿದ್ಧಪಡಿಸಿದ ಮತ್ತು ಅವರ ಸಾವಿನ ನಂತರ ಚರ್ಚೆಗೆ ಒಪ್ಪಿಗೆ ಪಡೆದ ಕರಡು ಮಸೂದೆಯಲ್ಲಿ ದೇವರು ಮತ್ತು ಧರ್ಮದ ವಿರುದ್ಧ ಒಂದೇ ಒಂದು ಸಾಲು ಕೂಡಾ ಸೇರಿಲ್ಲ. ಡಾ.ದಾಬೋಲ್ಕರರ ಸಾವು ವಿಚಾರಚಳುವಳಿಯ ಅಂತ್ಯವಲ್ಲವೆಂದು ನಾವು ತೋರಿಸುವುದೇ ಅವರಿಗೆ ನಿಜವಾದ ಶ್ರದ್ಧಾಂಜಲಿ. ಇಂತಹ ಚಳುವಳಿ ಒಬ್ಬರ ಜೀವಿತವನ್ನೂ ಮೀರಿ ಮುಂದುವರಿಯುತ್ತದೆ. ಕೊಪರ್ನಿಕಸ್, ಬ್ರೂನೋ, ಗೆಲಿಲಿಯೋ ರ ಜೀವಿತನ್ನೂ ಮೀರಿ ಮುಂದುವರಿದ ವೈಚಾರಿಕ ಚಳುವಳಿ ಡಾ.ದಾಬೋಲ್ಕರರ ಜೀವಿತವನ್ನೂ ಮೀರಿ ಮುಂದುವರಿಯುತ್ತದೆ.

ವಿಚಾರಕ್ರಾಂತಿ ಚಿರಾಯುವಾಗಲಿ!!

ಉದಯ ಗಾಂವಕಾರ

ಅಧ್ಯಕ್ಷ ಸಮುದಾಯ ಸಾಂಸ್ಕೃತಿಕ ಸಂಘಟನೆ(ರಿ),

ಕುಂದಾಪುರ ಘಟಕ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s