ಮಾಸದ ಕಾರ್ಯಕ್ರಮ-4

 

 

 

 

ಮನೆ ಮನೆಯಲ್ಲಿ ಸಮುದಾಯದ 4ನೇ ಮಾಸದ ಕಾರ್ಯಕ್ರಮ ಸಮುದಾಯದ ಉಪಾಧ್ಯಕ್ಷರಾದ ಶ್ರೀ ಕೆ.ಜಿ.ವೆಂಕಟೇಶ್ ಅವರ ಪಂಪನಗರದ ನಿವಾಸದಲ್ಲಿ ನಡೆಯಿತು.  ಶ್ರೀ ಸರ್ಜಾಶಂಕರ ಹರಳೀಮಠ ಅವರು ಅರವಿಂದ ಕೇಜ್ರಿವಾಲರ ಸ್ವರಾಜ್ಯ ಪುಸ್ತಕದ ಪರಿಚಯವನ್ನು ಮಾಡಿದರು, ಶ್ರೀಮತಿ ಅಂಬಿಕಾ ,ಕೆ.ಎಲ್.ಲತಾ,ಹಾಗೂ ಕೃಪಾಲಿನಿ ಅವರು ವಚನ ಹಾಗೂ ಭಾವಗೀತೆಗಳನ್ನು ಹಾಡಿದರು. ಅರವಿಂದ ಕೇಜ್ರಿವಾಲರ ಸ್ವರಾಜ್ಯ ಪುಸ್ತಕದಲ್ಲಿ ಈ ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಅವರ ಕನಸುಗಳನ್ನು ಹಾಗೂ ಯಶಸ್ವೀ ಪ್ರಯೋಗಗಳನ್ನು ದಾಖಲಿಸಲಾಗಿದೆ. ಸಾಮಾನ್ಯ ಜನ ನಮ್ಮಿಂದೇನೂ ಆಗದು ಎಂಬ ಹತಾಶೆ ಬಿಟ್ಟು, ಕ್ರಿಯಾಶೀಲವಾಗಿ ಪ್ರಯತ್ನ ಪಟ್ಟರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು ಸಾಧ್ಯವಿದೆ ಎಂದು ಅನೇಕ ಘಟನೆಗಳನ್ನು ಉದಾಹರಿಸುತ್ತಾರೆ. ಗಾಂಧಿಯವರ ಹಿಂದ್ ಸ್ವರಾಜ್ಯದಷ್ಟು ಉನ್ನತ ಮಟ್ಟದ ದಾರ್ಶನಿಕ ವಿಚಾರಗಳಿಲ್ಲದಿದ್ದರೂ, ಪ್ರಸ್ತುತ ಸನ್ನಿವೇಶದಲ್ಲಿ ಜನ ಸಾಮಾನ್ಯರು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಆಶಾವಾದವನ್ನು ಮೂಡಿಸುತ್ತದೆ ಎಂದು ಅಭಿಪ್ರಾಯ ಪಟ್ಟರು. ಗಾಂಧಿಯವರು ಗ್ರಾಮಸ್ವಾಜ್ಯ ಕಲ್ಪನೆ ಪರಿಣಾಮಕಾರಿಯಾಗಿ ಜಾರಿಯಾಗಿದ್ದರೆ, ಇಂದು ಯಾಂತ್ರೀಕರಣ ನಗರೀಕರಣಗಳಿಂದಾಗಿ ಹಳ್ಳಿಗಳು ವೃಧ್ಧಾಶ್ರಮಗಳಾಗುತ್ತಿರುವ ದುರಂತ ಸಂಭವಿಸುತ್ತಿರಲಿಲ್ಲ ಎಂದು ಶ್ರೀ ಸರ್ಜಾಶಂಕರ ಅಭಿಪ್ರಾಯ ಪಟ್ಟರು.

      ಶ್ರೀ. ನಾಗರಾಜ್ , ಮಹಾವೀರ್ ಕಾಸರ್, ಶ್ರೀಮತಿ ಗೀತಾ ಕುಬೇರಪ್ಪ, ಕೃಪಾಲಿನಿ, ನಾಗರತ್ನ ಮುಂತಾದವರು ಸಂವಾದದಲ್ಲಿ ಭಾಗವಹಿಸಿದ್ದರು. ಸಂವಾದಕ್ಕೆ ಉತ್ತರಿಸುತ್ತಾ ಶ್ರೀ ಸರ್ಜಾಶಂಕರ ಅವರು ಅರವಿಂದ ಕೇಜ್ರಿವಾಲರದ್ದೇನೂ ಪರಿಪೂರ್ಣ ಸಿದ್ಧಾಂತ ಅಥವಾ ದೋಷವಿಲ್ಲದ ಕ್ರಿಯೆಗಳಲ್ಲ, ಅವರಿಗೂ ಮಿತಿಗಳಿವೆ, ಆದರೂ ಬಹು ಮುಖ್ಯ ಪ್ರಶ್ನೆಗಳನ್ನೆತ್ತುತ್ತಾ ,ಭ್ರಷ್ಟ ವ್ಯವಸ್ಥೆಯ ಬಗ್ಗೆ ಸಾಮಾನ್ಯ ಜನರನ್ನು ಹತಾಶ ಸ್ಥಿತಿಯಿಂದ ಆಶಾವಾದದೆಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ಶ್ರೀ ಕೆ.ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿದ್ದರು, ಕಾರ್ಯದರ್ಶಿ ಶ್ರೀನಿವಾಸ ವಂದಿಸಿದರು.
shivmoga

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s