ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು” ನನ್ನ ವಿಚಾರದ ದಿಕ್ಕನ್ನೇ ಬದಲಾಯಿಸಿತು

5

 

 

 

 

 

 

 

 

*ವರದಿ-ವಸಂತರಾಜ ಎನ್. ಕೆ

      “ವಿಚಾರ ಸಾಹಿತ್ಯ–ಓದು ಹಾಗೂ ವಿಶ್ಲೇಷಣೆ” ಎಂಬ ವಾಚನಾಭಿರುಚಿಕಮ್ಮಟದಲ್ಲಿ ಈ ಶೀರ್ಷಿಕೆಯ ಪ್ರತಿಯೊಂದು ಶಬ್ದ ಮಾತ್ರವಲ್ಲ, ಮಂಡಿಸಲಾದ ನಾಲ್ಕೂ ಪಠ್ಯಗಳೂ ಪ್ರಶ್ನೆಗೆಏರುದನಿಯ ಬಿಸಿ ಬಿಸಿ ಚರ್ಚೆಗೆ ವಾಗ್ವಾದಕ್ಕೆ ಒಳಪಟ್ಟವು – ಉದ್ಘಾಟನಾ ಸಮಾರಂಭದಿಂದ ಸಮಾರೋಪದ ವರೆಗೆ, ನಾಲ್ಕೂ ಪಠ್ಯಗಳ ಓದು ಮತ್ತು ವಿಶ್ಲೇಷಣೆಯ ಪ್ರಕ್ರಿಯೆಯಲ್ಲೂ. ಮೇಲೆ ಹೇಳಿದ ಕಾರಂತರದೇವರ ಬಗೆಗಿನ ಪಠ್ಯ ಅವುಗಳಲ್ಲಿ ಒಂದುಆಗಿತ್ತು.

7ಈ ಕಮ್ಮಟದಲ್ಲಿ ಭಾಗವಹಿಸಿದ 50ಕ್ಕೂ ಹೆಚ್ಚು ಸ್ನಾತಕ ಸ್ನಾತಕೋತ್ತರ ಬಿ.ಎಡ್. ವಿದ್ಯಾರ್ಥಿಗಳು, ಅಧ್ಯಾಪಕರು, ಸಾಹಿತ್ಯಾಸÀಕ್ತರುಗಳಿಗೆ ಇದೊಂದು ಹೊಸ ಲೋಕ ತೆರೆಸಿತು. ಇದು ನಡೆದದ್ದುಕನ್ನಡ ಪುಸ್ತಕ ಪ್ರಾಧಿಕಾರಕುಂದಾಪುರದಲ್ಲಿ ಸಾಹಿತ್ಯ ಸಮುದಾಯ, ಸಮುದಾಯ-ಕುಂದಾಪುರ ಮತ್ತು ಭಂಡಾರಕರ್ಸ್‍ಕಾಲೇಜಿನ ಸಹಕಾರದೊಂದಿಗೆ ಏರ್ಪಡಿಸಿದ ಕಮ್ಮಟದಲ್ಲಿ ರುಚಿಯಂತೆಯೇಅಭಿರುಚಿ ಸಹ ಹುಟ್ಟಿನಿಂದ ಬರುವಂತಹುದಲ್ಲ. ಬೆಳೆಸಿಕೊಳ್ಳಬೇಕಾದ್ದು. ಓದುವ ಬರೆಯುವ ಅಭಿರುಚಿಗೂ ಇದು ಅನ್ವಯಿಸುತ್ತದೆ. ಈ ಅಭಿರುಚಿ ಬೆಳೆಸಿಕೊಂಡಾಗ ಮಾತ್ರ ಓದಿನ ನಂತರಅದು ನಮ್ಮೊಳಗೆ ಬೆಳೆಯುತ್ತದೆ. ಅದನ್ನು ಬೇರೆಯವರೊಡನೆಚರ್ಚಿಸುವ ಮೂಲಕ ಅದು ನಮ್ಮೊಳಗೆ ಪುನಸೃಷ್ಟಿಯಾಗುತ್ತದೆ. ಎಂದುಕಮ್ಮಟದಆಶಯ ನುಡಿಗಳನ್ನು ಆಡಿದವರುಕಮ್ಮಟದ ನಿರ್ದೇಶಕಡಾ. ಎಂ.ಜಿ. ಹೆಗಡೆ. ಈ ಕಮ್ಮಟದಲ್ಲಿಆಯ್ಕೆ ಮಾಡಲಾದ ನಾಲ್ಕು ಪಠ್ಯಗಳಲ್ಲಿ ಕನ್ನಡ ವಿಚಾರ ಸಾಹಿತ್ಯದಮೂರು ಆಯಾಮಗಳನ್ನು ಹಿಡಿದಿಡಲುಪ್ರಯತ್ನಿಸಲಾಗಿದೆ ಎಂದುಡಾ. ಹೆಗಡೆ ವಿವರಿಸಿದರು.ಕನ್ನಡ ವಿಚಾರ ಸಾಹಿತ್ಯದಪರಿಕಲ್ಪನೆ ಸ್ಥಾನಮಾನ, ಗ್ರಹಿಸುವ ರೀತಿÀ ಬೆಳೆದು ಬಂದಬಗೆಯನ್ನುಅದುಕಂಡಹಲವು ಅರ್ಥಪಲ್ಲಟಗಳು ಒಂದು ಆಯಾಮ. ರಾಷ್ಟ್ರೀಯತೆಯ ಪರಿಕಲ್ಪನೆಯ ಬಗ್ಗೆ ಬೆಳೆದು ಬಂದ ವಾಗ್ವಾದಗಳು, ಬೇರೆ ಬೇರೆ ಕಾಲಘಟ್ಟಗಳಲ್ಲಿ ಅದಕ್ಕೆ ಬೇರೆ ಬೇರೆ ಜನವಿಭಾಗಗಳು ಕೊಟ್ಟ ನಿರೂಪಣೆ, ಪ್ರತಿಕ್ರಿಯಿಸಿದ ರೀತಿಇತ್ಯಾದಿ ಎರಡನೇಯದು. ಏರುದನಿಯ ಮಂಡನೆಯಿಂದ ಹಿಡಿದು, ವಾಗ್ವಾದ, ಸಂವಾದ, ಮೆಲುದನಿಯ ಸ್ವಗತದವರೆಗೆ ವಿಚಾರ ಸಾಹಿತ್ಯದವಿವಿಧಶೈಲಿಗಳನ್ನು ಗುರುತಿಸುವುದು ಮೂರನೇಯದು.2
ಕಮ್ಮಟದಉದ್ಘಾಟನೆ ಮಾಡುತ್ತಾ ಪ್ರೊ. ವಿ. ಎನ್. ಲಕ್ಷ್ಮಿನಾರಾಯಣ ಅವರು ವಿಚಾರ ಸಾಹಿತ್ಯವನ್ನುಭಿನ್ನವಾಗಿನಿರ್ವಚಿಸಿದರು.  ‘ವಿಚಾರ’ ಇಂದ್ರಿಯಗಳಿಂದ ಗ್ರಹಿಸಿದ್ದನ್ನು ವಿಂಗಡಿಸುವುದು, ಎಲ್ಲವನ್ನೂ ಪ್ರಶ್ನಿಸುವುದು, ಸಮಗ್ರವಾಗಿ ನೋಡುವುದು ಎಂದು ಅವರು ವಿವರವಾಗಿ ವ್ಯವಸ್ಥಿತವಾಗಿ ನಿರ್ವಚಿಸಿದರು.ವಿಚಾರ ಸಾಹಿತ್ಯ ಓದುವುದು ಎಂದರೆ ತಾಯಿ-ಕುಟುಂಬ ಮತ್ತು ಗುರು-ಹಿರಿಯರು ಮೂಡಿಸಿದ ‘ನಂಬಿಕೆ’ಯನ್ನು ಪ್ರಶ್ನಿಸಿ ಅವುಗಳನ್ನು ಅವರು ಹಾಕಿ ಕೊಟ್ಟ ಚೌಕಟ್ಟುಗಳನ್ನು ಬಿಟ್ಟು ಹೊಸ ಚೌಕಟ್ಟುಗಳಲ್ಲಿ ಪರಿಶೀಲನೆಗೆ ಒಡ್ಡುವುದು ಎಂದರು.

 

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾಕನ್ನಡ ಪುಸ್ತಕ ಪ್ರಾಧಿಕಾರದಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ ಕಮ್ಮಟಕ್ಕೆಆಯ್ದುಕೊಂಡ ಗೌರೀಶಕಾಯ್ಕಿಣಿಯವರ ಪಠ್ಯದ ಒಂದು ಭಾಗದ ಸಮಕಾಲೀನ ಮಹತ್ವವನ್ನುಎತ್ತಿ ತೋರಿಸಿದರು. “ಪಾಶ್ಚಾತ್ಯ ಸಂಸ್ಕøತಿ ಭೌತವಾದಿ ಮತ್ತು ಕಾಮುಕ. ಭಾರತೀಯ ಸಂಸ್ಕøತಿಆಧ್ಯಾತ್ಮಿಕ” ಎಂಬ ವಾದವನ್ನುಅವರು ತರ್ಕಬದ್ಧವಾಗಿ ಖಂಡಿಸಿದ್ದನ್ನು ತಿಳಿಸಿ ಈಗಲೂ ಅದೇ ವಾದ-ಪ್ರತಿವಾದ ನಡೆಯುತ್ತಿದೆಎಂದುಎತ್ತಿ ತೋರಿಸಿದರು. ಭಗವದ್ಗೀತೆ ರಾಷ್ಟ್ರೀಯ ಗ್ರಂಥವಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಪಾರ್ಲಿಮೆಂಟಿನಲ್ಲಿ ಹೇಳಿದ್ದನ್ನೇ ನಾನೂ ಹೇಳಿದ್ದು. ಆದರೆನನ್ನ ಮೇಲೆ ಮಾತ್ರ ಯಾಕೆ ಕೇಸ್‍ರಿಜಿಸ್ಟರ್ ಮಾಡಲಾಗಿದೆ ಎಂದುವೈಚಾರಿಕತೆ ಮೇಲೆ ಕಟ್ಟುಪಾಡು ವಿಧಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳನ್ನು ಪ್ರಶ್ನಿಸಿದರು.
9ಉದ್ಘಾಟನಾ ಸಮಾರಂಭದಲ್ಲಿ ನಾಡೋಜ ಸಾರಾಅಬೂಬಕ್ಕರ್ ಮತ್ತು ಮಣಿಪಾಲ ಅಕಾಡೆಮಿಯಡಾ. ಶಾಂತಾರಾಂ ಸಹ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಮಾಧವಿ ಭಂಡಾರಿ ಸ್ವಾಗತ ಮಾಡಿದರು. ಕುಂದಾಪುರ ಸಮುದಾಯದ ಉಪಾಧ್ಯಕ್ಷ ಜಿ.ವಿ.ಕಾರಂತ ಉಪಸ್ಥಿತರಿದ್ದರು.
ಕಮ್ಮಟದಲ್ಲಿಓದು ಮತ್ತು ವಿಶ್ಲೇಷಣೆಗೆನಾಲ್ಕು ಪಠ್ಯಗಳನ್ನು ಆರಿಸಲಾಗಿತ್ತು. ಗೌರೀಶ ಕಾಯ್ಕಿಣಿಯವರ “ಭಾರತೀಯ ಸಂಸ್ಕøತಿಯು ಆಧ್ಯಾತ್ಮಿಕವೇ?”, ಶಿವರಾಮ ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು”, ಆರ್.ವಿ ಭಂಡಾರಿಅವರ “ಸಾಂಸ್ಕøತಿಕ ಸಂಘರ್ಷಗಳನ್ನು ಗ್ರಹಿಸುವ ವಿಧಾನಯಾವುದು?”, ಸಾರಾಅಬೂಬಕ್ಕರ್‍ಅವರ “ಭಾರತೀಯ ಸಮಾಜ, ಸಂಸ್ಕøತಿ, ಮಹಿಳೆ” ಆರಿಸಲಾದ ಮುಖ್ಯ ಪಠ್ಯಗಳು. ಪ್ರತಿಯೊಂದು ಪಠ್ಯ ಮತ್ತು ಲೇಖಕರ ಬಗ್ಗೆ ಒಬ್ಬ ಪರಿಣತರುಒಂದು ಪ್ರವೇಶಿಕೆ ಒದಗಿಸಿದರು. ಆ ಮೇಲೆ ಕಮ್ಮಟದಲ್ಲಿ ಭಾಗವಹಿಸುವವರು ಗುಂಪುಗಳಲ್ಲಿ ಓದಿ ವಿಶ್ಲೇಷಿಸಿ ಚರ್ಚಿಸಿದರು. ಪುನಃ ಎಲ್ಲರೂ ಸೇರಿದಾಗ ಪ್ರತಿಯೊಂದು ಗುಂಪಿನ ಪರವಾಗಿಅವರ ಗ್ರಹಿಕೆಗಳನ್ನು ಹೇಳಿದರು. ಪ್ರಶ್ನೆಗಳನ್ನು ಕೇಳಿದರು. ಕೆಲವೊಮ್ಮೆ ಪಠ್ಯದಹಾಗೂ ಪರಿಣತರಅಭಿಪ್ರಾಯದ ಬಗ್ಗೆ ಭಿನ್ನಮತ ಸಹ ವ್ಯಕ್ತಪಡಿಸಿದರು. ಅದಕ್ಕೆ ಪರಿಣತರುಉಪಸಂಹಾರ ಮಾಡುತ್ತಾತಮ್ಮಅಭಿಪ್ರಾಯ ತಿಳಿಸಿದರು. ಗೌರೀಶಕಾಯ್ಕಿಣಿಯವರ ಪಠ್ಯಕ್ಕೆ ಪ್ರೊ. ವರದೇಶ ಹಿರೇಗಂಗೆ, ಶಿವರಾಮ ಕಾರಂತರ ಓದಿಗೆ ಪ್ರೊ. ಕೇಶವ ಶರ್ಮಾ, ಆರ್. ವಿ. ಭಂಡಾರಿಯವರಪಠ್ಯಕ್ಕೆಡಾ. ಡೊಮಿನಿಕ್, ಸಾರಾಅವರ ಓದಿಗೆಡಾ. ನಿಕೇತನ ಪರಿಣತರಾಗಿದ್ದರು.
ಸುಮಾರು2 ಗಂಟೆಗಳ ಅವಧಿತೆಗೆದುಕೊಂಡ ಈ ಪ್ರಕ್ರಿಯೆಏಕಮುಖವಾಗಿರಲಿಲ್ಲ ಅಂದರೆ ಪರಿಣತರು ಹೇಳುವುದು ಇತರರು ಕೇಳುವುದು ಮಾತ್ರಆಗಿರಲಿಲ್ಲ. ಬರಿಯ ದ್ವಿಮುಖವೂಆಗಿರಲಿಲ್ಲ. ಕಮ್ಮಟದ ನಿರ್ದೇಶಕರು, ಉದ್ಘಾಟಕರೂ, ಅತಿಥಿಗಳೂ, ಇತರ ಪರಿಣತರು, ಸಂಘಟಕರೂ ಸೇರಿದಂತೆ ಬಹುಮುಖಿಯಾಯಿತು. ಒಂದು ಪಠ್ಯದ ಬಗ್ಗೆ ಪರಿಣತರು ಪ್ರವೇಶಿಕೆಯಲ್ಲಿ ಮತ್ತುಉಪಸಂಹಾರ ಮಾಡುವಾಗ ವ್ಯಕ್ತಪಡಿಸಿದ ಅಭಿಪ್ರಾಯವನ್ನೇ ಪ್ರಶ್ನಿಸಲಾಯಿತು. ಇನ್ನೊಂದುಪಠ್ಯದಗೋಷ್ಟಿಯಲ್ಲಿ ಪರಿಣತರು ಮೂಲ ಪಠ್ಯವನ್ನು ಪಕ್ಕಕ್ಕಿಟ್ಟುತಮ್ಮದೇ ಪಠ್ಯವನ್ನು ಮಂಡಿಸುತ್ತಿದ್ದಾರೆಂಬ ಟೀಕೆ ಬಂತು. ಪ್ರತಿಯೊಂದು ಪಠ್ಯ ಹಲವು ಕೋನಗಳಿಂದ ತೀವ್ರ ವಿಶ್ಲೇಷಣೆಗೆ ಒಳಗಾಯಿತು. ಪಠ್ಯ ಬರೆದವರಓದುತ್ತಿರುವವರಒಟ್ಟಾರೆದೃಷ್ಟಿಕೋಣ/ಲೋಕದೃಷ್ಟಿ ನಿರ್ದಿಷ್ಟ ಪಠ್ಯಕ್ಕೆ ಎಷ್ಟು ಪ್ರಸ್ತುತ, ಹಲವು ‘ಓದು’ಗಳ ನಡುವಿನ ತಾಕಲಾಟ ಬಗೆಹರಿಸುವುದು ಹೇಗೆ ಮುಂತಾದ ಹಲವು ವಿಷಯಗಳ ಬಗ್ಗೆ ಕಮ್ಮಟ ‘ಲೈವ್‍ಡೆಮೊ’ ಆಯಿತು. ಸಮಕಾಲೀನ ವಿವಾದಗಳಾದ ಹಿಂದೂ ಸಮಾಜೋತ್ಸವ, ಘರ್ ವಾಪಸಿ, ಲವ್-ಜಿಹಾದ್ ಗಳಿಗೂ ಈ ಪಠ್ಯಗಳಿಗೂ ಇರುವ ಸಂಬಂಧ ಸಹ ಚರ್ಚೆಗೆ ಬಂತು.
ಕಾರಂತೆರ“ನಮ್ಮ ಅಳತೆಯನ್ನು ಮೀರಲಾರದದೇವರು” ಓದಿನ ಚರ್ಚೆಯಲ್ಲಿಭಾಗವಹಿಸಿದ ಅಧ್ಯಾಪಕಿತಾನು ಪಿಯುಸಿಯಲ್ಲಿ ಇದನ್ನು ಮೊದಲ ಬಾರಿಗೆಓದಿದಾಗತನ್ನವಿಚಾರದ ದಿಕ್ಕನ್ನೇ ಬದಲಾಯಿಸಿತ್ತು ಎಂದು ನೆನಪಿಸಿಕೊಂಡರು. ಸಮಾರೋಪದಲ್ಲಿಕಮ್ಮಟದಲ್ಲಿ ಭಾಗವಹಿಸಿದªರ ಪ್ರತಿನಿಧಿಗಳಿಂದÀ ಇಂತಹ ನಿರ್ದಿಷ್ಟ ಪ್ರತಿಕ್ರಿಯೆ ಬರದಿದ್ದರೂಇಂತಹ ಪರಿಣಾಮದ ಸಾಧ್ಯತೆಯಂತೂಕಂಡು ಬಂತು. ಅಲ್ಲದೆ ಹಲವು ಬಿ.ಎಡ್. ಮತ್ತುಕಾಲೇಜು ಶಿಕ್ಷಕರಿಂದ ಅವರ ಸಂಸ್ಥೆಗಳಲ್ಲಿ ಇಂತಹಕಮ್ಮಟ ನಡೆಸಲು ಸ್ಫೂರ್ತಿ ಸಹ ಕಂಡು ಬಂತು. ಸಮಾರೋಪದಲ್ಲಿ ಡಾ. ಭಾಸ್ಕರ ಮಯ್ಯ, ಸಾಹಿತ್ಯ ಸಮುದಾಯದ ವಸಂತರಾಜ, ಕುಂದಾಪುರ ಸಮುದಾಯದ ಉದಯಗಾಂವಕರ್ ಮತ್ತು ಸದಾನಂದ ಬೈಂದೂರು  ಮಾತನಾಡಿದರು.

 

Advertisements

2 responses to “ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು” ನನ್ನ ವಿಚಾರದ ದಿಕ್ಕನ್ನೇ ಬದಲಾಯಿಸಿತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s