ಸಹಯಾನ ಸಾಹಿತ್ಯೋತ್ಸವ- ಸರ್ವಾಧ್ಯಕ್ಷರಾಗಿ ಡಾ. ಪುರುಷೋತ್ತಮ ಬಿಳಿಮಲೆ

ಸಹಯಾನ ಸಾಹಿತ್ಯೋತ್ಸವ-10 ಮೇ 2015, ರವಿವಾರ
ಜಾನಪದ : ಹೊಸ ತಲೆಮಾರು
ಪ್ರತಿ ವರ್ಷದಂತೆ ‘ಸಹಯಾನ’ದಿಂದ ಮೇ 10, 2015 ರಂದು ರವಿವಾರ ಸಹಯಾನ ಸಾಹಿತ್ಯೋತ್ಸವವನ್ನು ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ಏರ್ಪಡಿಸಲಾಗುತ್ತಿದ್ದೇವೆ. ಜಾನಪದ : ಹೊಸ ತಲೆಮಾರು’ ಎನ್ನುವ ವಿಷಯದ ಮೇಲೆ ರಾಜ್ಯ ಮಟ್ಟದ ಸಾಹಿತ್ಯೋತ್ಸವ ನಡೆಯುತ್ತಿದ್ದ್ದು ಖ್ಯಾತ ವಿಮರ್ಶಕರು, ಲೇಖಕರು ಜಾನಪದ ತಜ್ಞರಾದ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಉತ್ಸವದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.

10806462_10152799634304034_4789410608056260802_n

ಸರ್ವಾಧ್ಯಕ್ಷತೆ ವಹಿಸಿಕೊಳ್ಳುವ ಪುರುಷೋತ್ತಮ ಬಿಳಿಮಲೆ ಪ್ರಸ್ತುತ ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ, ನವದೆಹಲಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯ, ಕನ್ನಡ ಜಾನಪದ, ಯಕ್ಷಗಾನ, ತುಳು ಭಾಷೆ ಮತ್ತು ತುಳು ಜಾನಪದ, ಭಾರತೀಯ ಸಾಹಿತ್ಯ ಮತ್ತು ಜಾನಪದದಲ್ಲಿ ಅಪಾರ ಓದು ಮತ್ತು ಅನುಭವ ಇರುವ ಡಾ. ಬಿಳಿಮಲೆಯವರು ಜಾಗತಿಕ ಸಂದರ್ಭದಲ್ಲಿ ಜಾನಪದ ಅಧ್ಯಯನದ ಸ್ವರೂಪ ಮತ್ತು ಹೊಸ ಮಾರ್ಗಗಳ ಕುರಿತು ಅಧ್ಯಯನ ಮಾಡಿದವರು.ಮಂಗಳೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯ, ಹಂಪಿ ಕನ್ನಡ ಪ್ರಾಧ್ಯಾಪಕರಾಗಿ, ಡೀನ್ ಆಗಿ , ಕುಲಸಚಿವರಾಗಿ, ಸಿಂಡಿಕೇಟ್ ಸದಸ್ಯರಾಗಿ ಅನುಭವವುಳ್ಳವರು.

ಮೆಕೆಂಜಿ ಕೈಫಿಯತ್ತುಗಳು, ಲಿಂಗರಾಜನ ಹುಕುಂ ನಾಮೆ, ದಲಿತಜಗತು,್ತ ಬಂಡಾಯ-ದಲಿತ ಸಾಹಿತ್ಯ ಕರಾವಳಿ ಜಾನಪದ, ಶಿಷ್ಟ-ಪರಿಶಿಷ್ಟ, ಕೊರಗರು, ಜಾನಪದಕ್ಷೇತ್ರಕಾರ್ಯ, ಕೋಮುವಾದ ಮತ್ತುಜನಸಂಸ್ಕøತಿ, ಕೂಡುಕಟ್ಟು, ಕುಮಾರರಾಮ, ಜನಸಂಸ್ಕøತಿ, ಬಹುರೂಪ, ಮುಂತಾದ ಪುಸ್ತಕಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ.

ವಿದೇಶ ಪ್ರಯಾಣ: ಟೋಕಿಯೋ, ಜಪಾನ್, ಹೀಬ್ರೂ ವಿಶ್ವವಿದ್ಯಾಲಯ, ಲಂಡನ್ ವಿಶ್ವವಿದ್ಯಾಲಯ, ಶಿಕಾಗೋ ವಿಶ್ವವಿದ್ಯಾಲಯ, ಅಮೆರಿಕಾ, ಗೆಂಟ್ ವಿಶ್ವವಿದ್ಯಾಲಯ, ಬೆಲ್ಜಿಯಂ, ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯೋರ್ಕ ವಿಶ್ವ ವಿದ್ಯಾಲಯ, ಹವಾಯಿ ವಿಶ್ವವಿದ್ಯಾಲಯ ಮತ್ತುಟೆಕ್ಸಾಸ್ ವಿಶ್ವವಿದ್ಯಾಲಯ, ಆಸ್ಟಿನ್., ಢಾಕಾ ವಿಶ್ವವಿದ್ಯಾಲಯಗಳಿಗೆ ಭೇಟಿಕೊಟ್ಟು ವಿಚಾರ ಉಪನ್ಯಾಸ ನೀಡಿರುತ್ತಾರೆ.

ಇವರ ಕೊಡುಗೆಯನ್ನು ಗುರುತಿಸಿ ಡಾ.ಗುಂಡ್ಮಿಚಂದ್ರಶೇಖರ ಐತಾಳ ಪ್ರಶಸ್ತಿ, ಬಿ.ಎಚ್.ಶ್ರಿ, ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ, ಆರ್ಯ ಭಟ ಪ್ರಶಸ್ತಿ, ಸಾರಂಗಮಠ ಪ್ರಶಸ್ತಿ, ಕು.ಶಿ.ಹರಿದಾಸ ಭಟ್ ಪ್ರಶಸ್ತಿ, ಕರ್ನಾಟಕಜಾನಪದಅಕಾಡೆಮಿ ಪ್ರಶಸ್ತಿ ಡಾ. ಸುನೀತಾ ಶೆಟ್ಟಿ ಪ್ರಶಸ್ತಿ ,ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ,ಅಕ್ಷರ ಶ್ರೀ ಪ್ರಶಸ್ತಿ ಗಳು ಅವರನ್ನು ಅರಸಿ ಬಂದಿದೆ.
ಇವರು ಡಾ. ಆರ್. ವಿ. ಭಂಡಾರಿಯವರ ಆತ್ಮೀಯ ಗೆಳೆಯರೂ ಆಗಿದ್ದರು ಎನ್ನುವುದು ಕೂಡ ಖುಶಿಯ ಸಂಗತಿ.
ಈ ಸಾಹಿತ್ಯೋತ್ಸವದಲ್ಲಿ ಜನಪದ ಬದುಕು, ಸಾಹಿತ್ಯ, ಕಲೆ ಮತ್ತು ಅಧ್ಯಯನದ ಹೊಸ ಸಾಧ್ಯತೆಗಳ ಕುರಿತು ವಿಚಾರ ಸಂಕಿರಣ, ಸಂವಾದ, ಕವಿಗೋಷ್ಠಿ, ಜಾನಪದ ಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದು ಡಾ. ಆರ್.ವಿ. ಭಂಡಾರಿಯವರ ನೆನಪಿನಲ್ಲಿ ನಡೆಯುವ ಈ ಸಾಹಿತ್ಯೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 100 ಕ್ಕಿಂತ ಹೆಚ್ಚು ಲೇಖಕರು, ಚಿಂತಕರು, ಕಲಾವಿದರು ಭಾಗವಹಿಸುತ್ತಿದ್ದಾರೆ. ಆರ್. ವಿ. ಭಂಡಾರಿಯವರ ಒಂದು ಪುಸ್ತಕವೂ ಬಿಡುಗಡೆಗೊಳ್ಳಲಿದೆ. ಅವರ ನೆನಪಿನಲ್ಲಿ ಒಂದು ಸಾಂಸ್ಕøತಿಕ ಕೇಂದ್ರ ಕಟ್ಟುವ ಕಾಯಕದ ಭಾಗವಾಗಿ ಅವರದೇ ಮನೆಯಂಗಳದಲ್ಲಿ ನಡೆಯುವ ಈ ಉತ್ಸವದಲ್ಲಿ ತಾವು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ‘ಸಹಯಾನ’ದ ಅಧ್ಯಕ್ಷರಾದ ಶಾಂತಾರಾಮ ನಾಯಕ ಹಿಚ್ಕಡ, ಕಾರ್ಯಾಧ್ಯಕ್ಷರಾದ ವಿಷ್ಣು ನಾಯ್ಕ, ಕಾರ್ಯದರ್ಶಿ ವಿಠ್ಠಲ ಭಂಡಾರಿ, ಕೆರೆಕೋಣ ವಿನಂತಿಸಿಕೊಂಡಿದ್ದಾರೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s