ಸಾಹಿತ್ಯ ಅಕಾಡೆಮಿ ಕೆ.ಎಸ್ ಭಗವಾನರಿಗೆ ಪ್ರಕಟಿಸಿದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಬಾರದು- ಚಿಂತನ ಉತ್ತರ ಕನ್ನಡ

ks-bhagawan

ಇತ್ತೀಚಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೆ.ಎಸ್. ಭಗವಾನ್, ರಾಜೇಂದ್ರ, ಚೆನ್ನಿ, ಮೊಗಳ್ಳಿ ಗಣೇಶ, ರಹಮತ್ ತರಿಕೆರೆ, ಬಿ. ಎನ್ ಸುಮಿತ್ರಾಬಾಯಿಯವರಿಗೆ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಿರುವುದಕ್ಕಾಗಿ ಚಿಂತನ ಉತ್ತರ ಕನ್ನಡವು ಪ್ರಶಸ್ತಿ ನೀಡಿದ ಅಕಾಡೆಮಿಯನ್ನೂ & ಪ್ರಶಸ್ತಿ ಪುರಸ್ಕøತರನ್ನೂ ಅಭಿನಂದಿಸುತ್ತದೆ. ಕನ್ನಡ ಸಂಸ್ಕøತಿಯನ್ನೂ, ಅದರ ವೈಚಾರಿಕ ಸೀಮೆಯನ್ನೂ  ವಿಸ್ತರಿಸಿದ ಮಹನೀಯರಿವರು. ಸೂಕ್ಷ್ಮ ಸಂವೇದನೆಯ, ಸಾಮಾಜಿಕ ಕಳಕಳಿಯ ಕೃತಿಗಳನ್ನು ನೀಡಿದ ಇವರ ಆಯ್ಕೆ ಸೂಕ್ತವಾದದ್ದೆಂದು ಚಿಂತನ ಅಭಿಪ್ರಾಯ ಪಡುತ್ತದೆ. ಆದರೆ ಇತ್ತೀಚೆಗೆ ಈ ಪ್ರಶಸ್ತಿ ಕುರಿತು ಕೆಲವರು ತಕರಾರು ತೆಗೆದಿದ್ದಾರೆ. ಅದರಲ್ಲೂ ಕೆ.ಎಸ್.ಭಗವಾನ್ ಅವರ ಕುರಿತು ಅವಹೇಳನಕಾರಿಯಾದ ಮಾತುಗಳನ್ನಾಡಿ, ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿರುವುದು, ಸಾಮಾಜಿಕ ಜಾಲತಾಣಗಳ ಮೂಲಕ ಧಾಳಿ ಇಡುತ್ತಿರುವದು ವಿಷಾದನೀಯವಾದದ್ದು. ಇಡೀ ಕರ್ನಾಟಕದ ಪ್ರತಿಯೊಬ್ಬರೂ ಒಪ್ಪಬಹುದಾದ ಒಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ಕುವೆಂಪು, ಬೇಂದ್ರೆಯಂಥವರನ್ನೇ ನಾಡಿನ ಎಲ್ಲಾ ವಲಯಗಳೂ ಒಪ್ಪ್ಪಿಲ್ಲ ಎಮೇಲೆ ಉಳಿದವರ ಬಗ್ಗೆ ನಾವು ಹೇಳಬೇಕಾಗಿಲ್ಲ. ವ್ಯಕ್ತಿಯ ಆಲೋಚನೆಯ ಕುರಿತು, ಆತನ ಕೃತಿಯ ಕುರಿತು ವೈಚಾರಿಕ ಭಿನ್ನಾಭಿಪ್ರಾಯಗಳು ಇದ್ದರೆ ಅವನ್ನು ಸಾರ್ವಜನಿಕವಾಗಿ ಆಧಾರ ಸಹಿತವಾಗಿ ಚರ್ಚಿಸುವ ಹಕ್ಕು ಈಗಿರುವ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಇದೆ. ಇವನ್ನು ಬಿಟ್ಟು ಕೃತಿಯನ್ನೇ ಓದದೆ ಅವಾಚ್ಯವಾಗಿ ಮಾತನಾಡುವುದು, ಆಧಾರ ರಹಿತವಾಗಿ ಕೂಗಾಡುವುದು, ಪ್ರಶಸ್ತಿಯನ್ನೇ  ಹಿಂತೆಗೆದು ಕೊಳ್ಳಲು ಬೆದರಿಕೆ ಹಾಕುವುದು ಇತ್ಯಾದಿ ಪ್ರವೃತ್ತಿಯನ್ನು ನಾವು ಖಂಡಿಸಬೇಕಾಗಿದೆ. ಕೆ.ಎಸ್.ಭಗವಾನ್ ಅವರ ಎಲ್ಲಾ ಅಲೋಚನೆಯನ್ನು ನಾವು ಒಪ್ಪಬೇಕೆಂದೇನೂ ಇಲ್ಲ ಅಥವಾ ಆ ಕುರಿತು ಚಿಂತನಕ್ಕೆ ಸಹಮತ ಇದೆ ಎಂದೇನೂ ಇದರ ಅರ್ಥವಲ್ಲ. ಆದರೆ ಅಕಾಡೆಮಿ ಪ್ರಜಾಸತ್ತಾತ್ಮಕವಾಗಿ  ಆಯ್ಕೆ ಮಾಡಿದ ಒಬ್ಬನನ್ನು ಪೂರ್ವಾಗ್ರಹ ಪೀಡಿತ ಗುಂಪೊಂದು ಸಂಸ್ಕøತಿಯ ರಕ್ಷಣೆಯ ಹೆಸರಿನಲ್ಲಿ ವಿರೋಧಿಸುವ ಮೂಲಕ ಇಡೀ ವೈಚಾರಿಕ ಕ್ಷೇತ್ರದ ಮೇಲೆ ದಾಳಿ ಮಾಡುವದನ್ನು ‘ಚಿಂತನಉ.ಕ’ ಖಂಡಿಸುತ್ತದೆ.  ಇದನ್ನ ಪ್ರಸಾಸತ್ತಾತ್ಮಕ ವ್ಯವಸ್ಥೆಯನ್ನು ಒಪ್ಪುವ ಮತ್ತು ಒಪ್ಪದಿರುವವರ ನಡುವಿನ ಸಂಘರ್ಷವಾಗಿಯೇ ಚಿಂತನ ನೋಡಬಯಸುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಬಾರದು.

ಕೆ.ಎಸ್. ಭಗವಾನ್ ತೀರ ಹಿರಿಯ ಲೇಖಕರು. ಇಂಗ್ಲೀಷ್‍ನಿಂದ ಕನ್ನಡಕ್ಕೆ 12 ಮಹತ್ವದ ಕೃತಿಯನ್ನು  ಅನುವಾದ ಮಾಡಿದ್ದಾರೆ.ಅನನ್ಯತೆ, ಭಾಷೆ ಮತ್ತು ಸಂಸ್ಕøತಿ, ಬುದ್ಧ ಮತ್ತು ಕಾರ್ಲಮಾಕ್ರ್ಸ ಮುಂತಾದ ವೈಚಾರಿಕ 8 ಕ್ಕೂ ಹೆಚ್ಚು ವೈಚಾರಿಕ ಪುಸ್ತಕಗಳನ್ನೂ  ಒಳಗೊಂಡಂತೆ ಸುಮಾರು 40 ಕ್ಕೂ ಹೆಚ್ಚು ಪುಸ್ತಕಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ಅವರ ಈ  ಕೃತಿಗಳನ್ನು ಆಧರಿಸಿ ಅವಲೋಕಿಸಿ ಪ್ರಶಸ್ತಿಯನ್ನು ಕೊಡಲಾಗಿದೆಯೇ ಹೊರತು ಅವರ ವಿವಾದಕ್ಕೆ ಕಾರಣವಾದ ಹೇಳಿಕೆಗಳಿಗಾಗಿ ಅಲ್ಲ ಎನ್ನುವುದು ಗಮನಿಸಬೇಕಾಗಿದೆ. ಹೀಗಾಗಿ ಚಿಂತನ ಉ.ಕ ವು ಈ ಸಂದರ್ಭದಲ್ಲಿ ಅಕಾಡೆಮಿಯನ್ನು ಬೆಂಬಲಿಸುತ್ತದೆ ಮಾತ್ರವಲ್ಲ ಯಾವುದೇ ಕಾರಣಕ್ಕೂ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಬಾರದೆಂದು ಆಗ್ರಹಿಸುತ್ತದೆ.

ಕಿರಣ ಭಟ್ಟ,                                                             ವಿಠ್ಠಲ ಭಂಡಾರಿ

ಜಿಲ್ಲಾ ಸಂಚಾಲಕರು ಚಿಂತನ ಉತ್ತರ ಕನ್ನಡ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s