ಸಮುದಾಯ ಕರ್ನಾಟಕ ರೆಪರ್ಟರಿ

ಸಮುದಾಯ ಕಿರೀಟಕ್ಕೆ ಮತ್ತೊಂದು ಗರಿ !

???????????????????????????????

ಸಮುದಾಯ ಕರ್ನಾಟಕ ರೆಪರ್ಟರಿಯ ಕಾರ್ಯಾಗಾರವು ಡಿಸೆಂಬರ್ 1, 2015 ರಂದು ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 30, 2015ರಂದು ರೆಪರ್ಟರಿಯ ಮೊದಲ ಪ್ರದರ್ಶನ ಅಲ್ಲಿ ಉದ್ಘಾಟನೆಗೊಳ್ಳಲಿದೆ. ಜನವರಿ 1, 2016 ರಂದು ತನ್ನ ಸಂಚಾರವನ್ನು ಶಿರಸಿಯಿಂದ ಪ್ರಾರಂಭಿಸಿ ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲಾ ಕೇಂದ್ರಗಳು ಮತ್ತು ಗಡಿನಾಡು ಕಾಸರಗೋಡಿನಲ್ಲಿ ಪ್ರದರ್ಶನ ಮಾಡಿದ ನಂತರ ಜನವರಿ 13, 2016 ರಂದು ರಾಜ್ಯದ ರಾಜಧಾನಿ ಬೆಂಗಳೂರು ನಗರವನ್ನು ರೆಪರ್ಟರಿ ತಲುಪಲಿದೆ.
ತದನಂತರ ಉತ್ತರ ಕರ್ನಾಟಕಕ್ಕೆ ಪಯಣ ಬೆಳಸಿ ಗುಲ್ಬರ್ಗಾ ನಗರದಲ್ಲಿ ನಡೆಯಲಿರುವ ಸಮುದಾಯ ನಾಟಕೋತ್ಸವದಲ್ಲಿ ಫೆಬ್ರವರಿ 12, 2016 ರಂದು ಪ್ರದರ್ಶನ ನೀಡಲಿದೆ. ಮತ್ತೆ ಅಲ್ಲಿಂದ ಹೊರಟು ಇನ್ನೂ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ಪ್ರದರ್ಶನ ನೀಡಿ ಫೆಬ್ರವರಿ 29, 2016 ಸೋಮವಾರದಂದು ಬೆಂಗಳೂರು ನಗರದಲ್ಲಿ ಸಮಾರೋಪ ಸಮಾರಂಭದಲ್ಲಿ ರೆಪರ್ಟರಿ ಪ್ರದರ್ಶನ ನಡೆಯಲಿದೆ.

ಹಸಿವು
ಗಂಗಿ ಪರಸಂಗ
ಮೃತ್ಯುಂಜಯ ನಾಟಕ
ಕನ್ನಡ ಸಾಹಿತ್ಯ ಲೋಕದ ಪ್ರಗತಿಶೀಲ ಜನಪರ ಕಾದಂಬರಿಕಾರ ನಿರಂಜನರ ‘ಮೃತ್ಯುಂಜಯ’ ಮತ್ತು ‘ಚಿರಸ್ಮರಣೆ’ ಕಾದಂಬರಿಗಳನ್ನು ಒಂದುಗೂಡಿಸಿ ರಚಿಸಲಾದ ‘ಮೃತ್ಯುಂಜಯ’ ರಂಗರೂಪವು ರೆಪರ್ಟರಿಯ ಬಹುಮುಖ್ಯ ಆಕರ್ಷಣೆಯಾಗಲಿದೆ. ಡಾ.ಎಂ.ಜಿ.ಹೆಗಡೆಯವರು ಸಿದ್ಧಪಡಿಸಿರುವ ಈ ರಂಗರೂಪವನ್ನು ರಂಗಭೂಮಿಯಲ್ಲಿ ಈಗಾಗಲೇ ರಂಗ ನಿರ್ದೇಶಕನಾಗಿ ತನ್ನ ಛಾಪು ಮೂಡಿಸಿರುವ ಡಾ.ಶ್ರೀಪಾದ ಭಟ್ ನಿರ್ದೇಶಿಸಲಿದ್ದಾರೆ. ರಂಗ ವಿನ್ಯಾಸವನ್ನು ರಂಗಭೂಮಿಯ ಹಿರಿಯ ಚೇತನ ಎಂ.ಎಸ್.ಸತ್ಯು ಅವರು ಸಿದ್ಧಪಡಿಸಲಿದ್ದಾರೆ. ಇದರ ಜತೆಯಲ್ಲೇ ಪ್ಯಾಲೆಸ್ತೈನ್ ಕುರಿತ ಒಂದು ಬೀದಿ ನಾಟಕವೂ ಕಾರ್ಯಾಗಾರದಲ್ಲಿ ಸಿದ್ಧವಾಗಲಿದೆ. ‘ಕಾವ್ಯರಂಗ’ ಎಂಬ ನವೀನ ಕಲಾ ಪ್ರಕಾರ ಕೂಡ ರೆಪರ್ಟರಿಯ ಭಾಗವಾಗಲಿದೆ.
ರೆಪರ್ಟರಿಯು ಪ್ರತಿಯೊಂದು ಊರಿನಲ್ಲಿಯೂ ಎರಡು ದಿನಗಳ ಕಾಲ ತಂಗಲಿದೆ. ರಂಗ ಮಂದಿರಗಳಲ್ಲಿ ನಾಟಕ ಪ್ರದರ್ಶನ ಒಂದು ದಿನವಾದರೆ, ಮತ್ತೊಂದು ದಿನ ವಿದ್ಯಾರ್ಥಿಗಳಿಗಾಗಿ ‘ಕಾವ್ಯರಂಗ’ ಪ್ರದರ್ಶನ ಕಾಲೇಜುಗಳಲ್ಲಿ ನಡೆಯಲಿದೆ. ಇವೆರಡರ ನಡುವೆ ಅವಕಾಶ ಸಿಗುವ ಕಡೆಗಳಲ್ಲೆಲ್ಲ ಬೀದಿ ನಾಟಕ ಪ್ರದರ್ಶನವಿರುತ್ತದೆ. ರಂಗ ನಾಟಕ ಕುರಿತ ಒಂದು ವಿಚಾರ ಗೋಷ್ಠಿಯನ್ನೂ ಪ್ರತಿ ಊರುಗಳಲ್ಲೂ ಏರ್ಪಡಿಸಲಾಗುವುದು.
ರೆಪರ್ಟರಿ ನಿರ್ವಹಣೆಗಾಗಿ ಸಮಿತಿ
ಸಂಚಾಲಕರು:
ಶ್ರೀ ದೇವೇಂದ್ರ ಗೌಡ ಎಸ್.
ಸಹಸಂಚಾಲಕರು:
ಡಾ.ಶರಣಪ್ಪ ಸೈದಾಪುರ(ಗುಲ್ಬರ್ಗಾ); ಶ್ರೀ ಅಚ್ಯುತ(ಕೆ.ಜಿ.ಎಫ್); ಡಾ.ವಿಠ್ಠಲ ಭಂಡಾರಿ(ಸಿದ್ದಾಪುರ-ಉಕ); ಶ್ರೀಮತಿ ಕೆ.ಎಸ್.ವಿಮಲ(ಬೆಂಗಳೂರು)
ಸದಸ್ಯರು:
ಪ್ರೊ.ಆರ್.ಕೆ.ಹುಡಗಿ(ಗುಲ್ಬರ್ಗಾ; ಶ್ರೀ ಟಿ.ಸುರೇಂದ್ರ ರಾವ್(ಬೆಂಗಳೂರು); ಶ್ರೀ ವೆಂಕಟೇಶ್ ಪ್ರಸಾದ್;
ನಿರ್ದೇಶಕರು:
ಡಾ.ಶ್ರೀಪಾದ ಭಟ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಎಂ.ಜಿ.ವೆಂಕಟೇಶ್ ಬೆಂಗಳೂರು 94806 96108
ವಾಸುದೇವ ಉಚ್ಚಿಲ ಮಂಗಳೂರು 96320 95219
ಆರ್. ಕೆ ಹುಡಗಿ ಗುಲ್ಬರ್ಗಾ 94801 48963
ಜಿ.ವಿ.ಕಾರಂತ ಕುಂದಾಪುರ 99642 81693
ದೇವೇಂದ್ರ ಗೌಡ ಸಿಂಧನೂರು 98457 13310
ಬಿ.ಐ.ಇಳಗೇರ್ ಧಾರವಾಡ 93431 04226
ಅಚ್ಯುತ ಕೆ.ಜಿ.ಎಫ್ 94486 74453

ಸಮುದಾಯದ ಇತಿಹಾಸ ತಿಳಿಯಲು-ಕ್ಲಿಕ್ ಮಾಡಿ

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s