ಕನ್ನಡ ಆತ್ಮಕತೆಗಳಲ್ಲಿ ದಲಿತ ಸಂವೇದನೆ -ವಾಚನಾಭಿರುಚಿ ಕಮ್ಮಟ

 

ಆತ್ಮಕಥೆಯ ಕಮ್ಮಟ ನಡೆಸಬಹುದು ಎಂದುಹೊಳೆದಿರಲಿಲ್ಲಮಾಲಗತ್ತಿ

– ವಸಂತರಾಜಎನ್.ಕೆ.

“ಸಾಹಿತ್ಯವಲಯದಲ್ಲಿ ಕಾವ್ಯಕಮ್ಮಟಗಳು ನಡೆದಿವೆ. ಕಥಾಕಮ್ಮಟಗಳು ನಡೆದಿವೆ. ಕಾದಂಬರಿ ಕಮ್ಮಟಗಳು ನಡೆದಿವೆ. ನಾಟಕ ಕಮ್ಮಟಗಳುನಡೆದಿವೆ. ವಿಮರ್ಶಾ ಕಮ್ಮಟಗಳೂನಡೆದಿವೆ. ಆದರೆ ಆತ್ಮಕಥೆಯ ಕಮ್ಮಟಗಳು ಈವರೆಗೆ ಎಲ್ಲಿಯೂನಡೆದಿಲ್ಲ. ಇದು ಮೊದಲನೆಯದು. ಇದೊಂದು ವಿಶಿಷ್ಟ ಸಾಹಿತ್ಯಕಮ್ಮಟ. ನಾನೇ ಎಷ್ಟೋ ಕಮ್ಮಟಗಳನ್ನು ನಡೆಸಿದ್ದೇನೆ. ಆತ್ಮಕಥೆಯ ಕಮ್ಮಟನಡೆಸಬಹುದು ಎಂದು ನನಗೆ ಎಂದೂಹೊಳೆದಿರಲಿಲ್ಲ.”

ಹೀಗೆಂದವರು ಕನ್ನಡದ ಬಹುಚರ್ಚಿತ ಪ್ರಸಿದ್ಧಆತ್ಮಕತೆ ‘ಗೌರ್ಮೆಂಟ್ಬ್ರಾಹ್ಮಣ’ ಬರೆದ ಡಾ. ಅರವಿಂದಮಾಲಗತ್ತಿ ತಮ್ಮ ಉದ್ಘಾಟನಾಭಾಷಣದಲ್ಲಿ.

atmakathe-kammata

ಮಂಗಳೂರಿನಲ್ಲಿ ಅಗಸ್ಟ್28-29ರಂದು ನಡೆದ “ಕನ್ನಡಅತ್ಮಕತೆಗಳಲ್ಲಿದಲಿತಸಂವೇದನೆ” ಎರಡು ದಿನಗಳ ಕಮ್ಮಟ ಉದ್ಘಾಟಿಸಿ ಅವರ ಆರಂಭದ ಮಾತುಗಳು ಇವಾಗಿದ್ದವು. ಬಹುಶಃ ಯಾವುದೇ ಸಾಹಿತ್ಯ ಸಂಘಟಕರು ಇದಕ್ಕಿಂತದೊಡ್ಡ ‘ಸರ್ಟಿಫಿಕೇಟು’ ನಿರೀಕ್ಷಿಸಲುಸಾಧ್ಯವಿಲ್ಲ. ಸಾಹಿತ್ಯಸಮುದಾಯ, ಡಿ.ವೈ.ಎಫ್.ಐ., ಕನ್ನಡ, ಪುಸ್ತಕಪ್ರಾಧಿಕಾರ ಮತ್ತು ಸೈಂಟ್ಅಲೋಶಿಯಸ್ಕಾಲೇಜಿನ ಕನ್ನಡವಿಭಾಗ ಈ ವಾಚನಾಭಿರುಚಿ ಕಮ್ಮಟವನ್ನು ಜಂಟಿಯಾಗಿ ಹಮ್ಮಿಕೊಂಡಿದ್ದವು.

ಚರ್ಮವಾದ್ಯದಧ್ವನಿನಾಲ್ಕುದಿಕ್ಕುಗಳಲ್ಲೂಮೊಳಗಲಿ

ಕಮ್ಮಟ ಅಷ್ಟೇ ವಿಶಿಷ್ಷವಾಗಿ ಉದ್ಘಾಟನೆಯಾಗಿದ್ದನ್ನೂ ಮಾಲಗತ್ತಿ ಅವರಮಾತುಗಳಲ್ಲೇ ಕೇಳಿ :“ಈ ಕಮ್ಮಟ ಚರ್ಮವಾದ್ಯಗಳ ನುಡಿತದಿಂದ ಆರಂಭವಾಗಿದ್ದು ಔಚಿತ್ಯಪೂರ್ಣವಾಗಿದೆ. ದಲಿತರಿಗೂ ಚರ್ಮಕ್ಕೂನಿಕಟವಾದ ಸಂಬಂಧವಿದೆ. ಕಾವ್ಯದ ಸಾಹಿತ್ಯದಮೀಮಾಂಸೆ ಆರಂಭವಾಗುವುದೇ ಚರ್ಮದಿಂದ. ಚರ್ಮವಾದ್ಯದ ಧ್ವನಿ ಕೇವಲ ನಾಲ್ಕುಗೋಡೆಗಳ ನಡುವೆ ಮೊಳಗದೆ, ನಾಲ್ಕುದಿಕ್ಕುಗಳಲ್ಲೂ ಮೊಳಗಲಿ”.

 

ಕಮ್ಮಟದಲ್ಲಿ 25-30 ಜನಇರ್ತಾರೆ ಎಂದು ಬಂದಿದ್ದ ಅವರಿಗೆಆಶ್ಚರ್ಯಕಾದಿತ್ತು. 200-300 ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತ್ಯಾಸಕ್ತರು ಕಿಕ್ಕಿರಿದುತುಂಬಿದ್ದರು. ‘ದಲಿತ’, ‘ಸಂವೇದನೆ’, ಆತ್ಮಕತೆ’ಗಳನ್ನುನಿರ್ವಚಿಸುತ್ತಾಕಮ್ಮಟದಆಶಯಸಹಮಾಲಗತ್ತಿಅವರಈ ಕೆಳಗಿನಮಾತುಗಳಲ್ಲೇ ಅತ್ಯಂತ ಸಮರ್ಥವಾಗಿಮೂಡಿಬಂದಿದೆ.

“ದಲಿತ ಅನ್ನುವ ಪದಯಾವುದೇಜನಾಂಗವನ್ನುಸೂಚಿಸುವಂಥದ್ದುಅಲ್ಲವೇಅಲ್ಲ. ದಲಿತ ಅನ್ನುವುದು ಒಂದು ಆಲೋಚನಾಕ್ರಮ. ನವೋದಯಕ್ಕೆಹೇಗೆ ಒಂದು ಚಿಂತನಾಕ್ರಮ ಇದೆಯೋ ಪ್ರಗತಿಪರಸಾಹಿತ್ಯಕ್ಕೆ ಹೇಗೆ ಒಂದು ಚಿಂತನಾಕ್ರಮಇದೆಯೋ ನವ್ಯಕ್ಕೆಹೇಗೆ ಒಂದುಚಿಂತನಾಕ್ರಮಇದೆ ಯೋಹಾಗೆಯೇ ದಲಿತವೂಕೂಡ ಒಂದು ಆಲೋಚನಾಕ್ರಮವನ್ನು ಪ್ರತಿನಿಧಿಸುತ್ತದೆವಿನಃಯಾವುದೇ ಜಾತಿಯನ್ನುಅಲ್ಲ.ದಲಿತ ಅನ್ನುವಪದದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರೆಲ್ಲರೂ ಸೇರಿಕೊಳ್ತಾರೆ. ಮಾರ್ಕ್ಸ್ವಾದಿಚಿಂತನೆಯ ಪ್ರಕಾರಶೋಷಣೆಗೆ ಒಳಗಾದವರೆಲ್ಲ ದಲಿತರು.”

“ಸಂವೇದನಾಶೀಲತೆಅಂದರೇನು? ಯಾವುದೇ ಸಮಾಜದ ಅನುಭವಕ್ಕೆಸ್ಪಂದಿಸಬಲ್ಲ ಸಾಮರ್ಥ್ಯವೇ ಸಂವೇದನೆ. ಅದು ಯಾವುದೇ ಸಮಾಜ ಇರಬಹುದು. ನಮ್ಮದೇಶದಲ್ಲಿ ಜಾತಿ, ಮತ, ಪಂಗಡ, ಜನಾಂಗಗಳು, ವರ್ಣವ್ಯವಸ್ಥೆಹೀಗೆಹಲವಾರುಕಂಪಾರ್ಟ್ಮೆಂಟ್ಗಳಿವೆ. ಹೀಗಾಗಿ ನಮ್ಮದೇಶದಲ್ಲಿ ಸಂವೇದನೆಅನ್ನುವಪದಕ್ಕೆಎಲ್ಲಿಲ್ಲದ ಮಹತ್ವಇದೆ. ಸಂವೇದನೆ ಈ ಕಂಪಾರ್ಟ್ಮೆಂಟ್ಗಳನ್ನು ಒಡೆಯುತ್ತದೆ. ಒಂದರಿಂದ ಇನ್ನೊಂದುಕಂಪಾರ್ಟ್ಮೆಂಟ್ಗೆಜಿಗಿಯುತ್ತದೆ. ಒಂದು ಜಾತಿಯಿಂದಇ ನ್ನೊಂದಕ್ಕೆ, ಒಂದುಮತದಿಂದ ಇನ್ನೊಂದಕ್ಕೆ, ಒಂದುಧರ್ಮದಿಂದ ಇನ್ನೊಂದಕ್ಕೆ ಸ್ಪಂದಿಸುವುದು, ಒಡನಾಡುವುದು, ಬೆರೆಯುವುದುಇದುಸಂವೇದನೆ. ಸಂವೇದನೆ ಸಂಚಲನ ರೂಪದ್ದು. ಅದು ಪರೋಕ್ಷವಾಗಿ ಅನುಭವ ಮತ್ತು ಅಭಿವ್ಯಕ್ತಿಯ ಮೌಲ್ಯಮಾಪನಮಾಡುವ ಪ್ರಕ್ರಿಯೆಗೆ ಸಹಾಯಕವಾಗುವ ಮಾಧ್ಯಮ.ನಮ್ಮಲ್ಲಿ ಸಂವೇದನೆಯವಿಷಯ ಬಂದಾಗ ಅಲ್ಲಿ ಜಾತಿ, ಮತ, ಪಂಥ, ಕುಲಇವೆಲ್ಲವೂ ಒಳಗೊಳ್ಳುತ್ತವೆ. ಮನುಷ್ಯಜಾತಿ ತಾವೆಲ್ಲಾಒಂದೇ ಅನ್ನುವ ಭಾವನೆಯನ್ನು ಈಸಂವೇದನೆ ಉಂಟುಮಾಡುತ್ತದೆ. ಎಲ್ಲಿ ಸಂವೇದನಾರಹಿತ ಬದುಕು ಇದೆಯೋ ಅಲ್ಲಿ ಅಸಹಿಷ್ಣುತೆಯಬದುಕಿದೆ. ಆದ್ದರಿಂದ ಇಂದಿನ ಕಾಲಘಟ್ಟಕ್ಕೆ ಸಂವೇದನೆಯ ಪರಿಭಾಷೆ ಅತ್ಯಂತಔಚಿತ್ಯಪೂರ್ಣವಾಗಿದೆಮತ್ತುಸಕಾರಾತ್ಮಕವಾಗಿದೆ.”

“ಸ್ವಪ್ರತಿಷ್ಟೆಯನ್ನುಪ್ರತಿಪಾದಿಸುವುದೇಆತ್ಮಕತೆಎನ್ನಲಾಗುತ್ತಿತ್ತುನಾನೆಷ್ಟುಆದರ್ಶಮಯಬದುಕನ್ನುಕಳೆದೆ? ನನ್ನಮನೆತನಎಷ್ಟುಪ್ರತಿಷ್ಠಿತವಾಗಿತ್ತು? ನನ್ನಸಾಧನೆಯಹಾದಿಹೇಗಿತ್ತು? ಇತ್ಯಾದಿಗಳನ್ನುಹೇಳಿಕೊಳ್ಳುವಸ್ವಪ್ರಶಂಸೆಯಬರಹಗಳೇಆತ್ಮಕಥೆಗಳಾಗಿದ್ದವು. ಆದರೆದಲಿತಬಂಡಾಯದಕಾಲದಲ್ಲಿಇದುಸಂಪೂರ್ಣಬದಲಾಯ್ತು. ಆತ್ಮಪ್ರತಿಷ್ಟೆಯಹುಡುಕಾಟಅಲ್ಲಿತ್ತು. ಸ್ವಪ್ರತಿಷ್ಟೆಯನ್ನುವಿರೋಧಮಾಡುವುದೇದಲಿತಬಂಡಾಯದಮೂಲಸತ್ವವಾಯ್ತು. ಹೀಗಾಗಿಆತ್ಮಕಥೆಗಳುಕೂಡಅಧ್ಯಯನಯೋಗ್ಯ, ಅಭ್ಯಾಸಯೋಗ್ಯಎನ್ನುವಆಲೋಚನಾಕ್ರಮಜೊತೆಗೂಡಿತು. ದಲಿತಆತ್ಮಕಥನಗಳುಆತ್ಮಕಥನಸಾಹಿತ್ಯಕ್ಕೆಕೊಟ್ಟದೊಡ್ಡಕೊಡುಗೆಇದು. ಪರಿಕಲ್ಪನೆಯನ್ನುಒಡೆದುಕಟ್ಟುವಕ್ರಿಯೆಇದುದಲಿತಆತ್ಮಕಥನಪರಂಪರೆಯವೈಶಿಷ್ಟ್ಯವಾಯ್ತು.”

ನನ್ನಪ್ಪನಸ್ವಾತಂತ್ರ್ಯ!

ಮರಾಠಿಆತ್ಮಕತೆಗಳಿಂದಪ್ರೇರಿತವಾಗಿವೆಎನ್ನುವ ‘ಹತ್ತುವಿಮರ್ಶೆಓದಿಹನ್ನೊಂದನೇವಿಮರ್ಶೆಬರೆಯುವ’ ವಿಮರ್ಶಕರನ್ನುತರಾಟೆಗೆತೆಗೆದುಕೊಂಡಮಾಲಗತ್ತಿಅವರುಸಂರಚನೆಯಲ್ಲಿಕನ್ನಡದಲಿತಆತ್ಮಕತೆಗಳಅನನ್ಯತೆಯನ್ನುಹೀಗೆವಿವರಿಸಿದರು.

“ಮರಾಠಿಆತ್ಮಕಥೆಗಳುಕಾದಂಬರಿಯಮಾದರಿಯಲ್ಲಿರಚನೆಗೊಂಡಿರುವುದೇಹೆಚ್ಚು. ಒಂದುಭಾಗದಿಂದಇನ್ನೊಂದುಭಾಗಕ್ಕೆಬಿಡಿಸಲಾಗದಸಂಬಂಧವನ್ನಇಟ್ಟುಬೆಳೆಯುತ್ತಾಹೋಗುತ್ತವೆ. ಆದರೆಕನ್ನಡದಯಾವುದೇಆತ್ಮಕತೆಯನ್ನುತೆಗೆದುಕೊಂಡರೆ, ಯಾವುದೂಕೂಡಕಾದಂಬರಿಯಮಾದರಿಯಲ್ಲಿಇಲ್ಲ. ಅವೆಲ್ಲವೂಕೂಡಘಟನೆಮತ್ತುಅನುಭವಗಳುಬಿಡಿಬಿಡಿಯಾಗಿಸಂಕಲನಗೊಂಡಂತಿವೆ. ಆತ್ಮಚರಿತ್ರೆಬೇರೆ, ಆತ್ಮಕತೆಬೇರೆ. ನಾನುಗೌರ್ಮೆಂಟ್ಬ್ರಾಹ್ಮಣಬರೆದುದಶಕಗಳುಕಳೆದಿವೆ. ಆತ್ಮಚರಿತ್ರೆಯಲ್ಲಿಹುಟ್ಟಿನಿಂದಹಿಡಿದುಕೊನೆಯವರೆಗಿನಬದುಕಿನವಿವರಗಳುಇರುತ್ತವೆ. ಆದರೆಗೌರ್ಮೆಂಟ್ಬ್ರಾಹ್ಮಣನನ್ನಯೌವನದಹಂತಕ್ಕೇಕೊನೆಗೊಂಡಿದೆ. ಅದುಅಪೂರ್ಣ. ಆದ್ದರಿಂದನಾನದನ್ನುಆತ್ಮಕತೆಎಂದುಕರೆದೆ. ಅದಕ್ಕಿಂತಹಿಂದೆಆತ್ಮಕತೆಗಳನ್ನೂಆತ್ಮಚರಿತ್ರೆಎಂದೇಕರೆಯಲಾಗ್ತಿತ್ತು.”

ಮಾಲಗತ್ತಿಯವರಮಾತುಗಳಲ್ಲದೆ2 ದಿನಗಳಕಮ್ಮಟದ ಇತರಗೋಷ್ಟಿಗಳಲ್ಲೂ ಅವರ ‘ಗೌರ್ಮೆಂಟ್ಬ್ರಾಹ್ಮಣ’ದಹಲವುಪ್ರಸಂಗಗಳನ್ನುನೆನಪಿಸಿಕೊಳ್ಳಲಾಯಿತು. ವಿಶ್ಲೇಷಿಸಲಾಯಿತು. ಅವುಗಳಲ್ಲಿ ಒಂದಂತೂ ಈಗಲೂ ದಲಿತರ ಸ್ವಾತಂತ್ರ್ಯದ ದುಸ್ಥಿತಿಯ, ಅದನ್ನುನಿರೂಪಿಸುವ ದಲಿತಆತ್ಮಕತೆಗಳ ಮಹತ್ವದಸಮರ್ಥರೂಪಕವಾಗಿ ಕಮ್ಮಟದಲ್ಲಿಪಾಲುಗೊಂಡವರನ್ನುಬಹಳಕಾಲಕಾಡುವಶಕ್ತಿಯನ್ನುಹೊಂದಿತ್ತು. ಅದನ್ನೂಮಾಲಗತ್ತಿಯವರಮಾತುಕತೆಗಳಲ್ಲೇಕೇಳುವುದುಸೂಕ್ತ:

“ಸ್ವಾತಂತ್ರ್ಯದವಿಷಯವಾಗಿನಮ್ಮದೇಶದನಾಯಕರುಒಬ್ಬೊಬ್ಬರುಒಂದೊಂದುಕಲ್ಪನೆಇಟ್ಟುಕೊಂಡಿದ್ದರು. ನನ್ನಪ್ಪ, ಭಾರತಕ್ಕೆಸ್ವಾತಂತ್ರ್ಯಬಂದರೆಬಾವಿಗಳಿಗೆಸಲೀಸಾಗಿಹೋಗಿನೀರುಸೇದಿಕೊಂಡುಕುಡಿಯಬಹುದುಅಂದುಕೊಂಡಿದ್ದ! ಕೊನೆಗೂಸ್ವಾತಂತ್ರ್ಯ ಬಂದಾಗ ಇಂದಿನಿಂದಊರಿನಎಲ್ಲಾಬಾವಿಗಳನೀರುಸೇದಲುತಾನುಸ್ವತಂತ್ರಎಂದುನನ್ನಪ್ಪಭಾವಿಸಿದ. ನೀರುಸೇದುವಾಗಯಾರೂತಮ್ಮನ್ನುತಡೆಯಲಾರರುಅಂದುಕೊಂಡಿದ್ದ. ಹಾಗೆಯೇಸ್ವಾತಂತ್ರ್ಯಘೋಷಣೆಯಾದದಿನಊರಿನಬಹುತೇಕಬಾವಿಕಟ್ಟೆಗಳಿಗೆಹೋಗಿನೀರುಮೊಗಮೊಗೆದುಸೇದಿದ್ದ, ಅಲ್ಲೇಚೆಲ್ಲಿದ್ದ. ಅವನಸ್ವಾತಂತ್ರದಖಷಿಗೆಮಿತಿಯಿರಲಿಲ್ಲ. ತನಗೆಸ್ವಾತಂತ್ರ್ಯದೊರೆತಿದೆ! ತಾನುಯಾವಬಾವಿಯನ್ನಾದರೂಮುಟ್ಟಬಹುದು! ಎಲ್ಲಿಂದಲಾದರೂನೀರುಪಡೆಯಬಹುದು!! ಅನ್ನೋದುಅವನಸಂಭ್ರಮದಕಾರಣವಾಗಿತ್ತು. ಆದರೆಆಸ್ವಾತಂತ್ರ್ಯಒಂದೇದಿನಕ್ಕೆಮುಗಿದುಹೋಯ್ತು. ಮಾರನೇದಿನ, “ಬರಲಿಅವನುಹೊಲೆಯನೀರುಸೇದಲು ,ಕಾಲುಮುರಿಯುತ್ತೇವೆಎಂದುಊರಿನಸವರ್ಣೀಯರುಬಡಿಗೆಹಿಡಿದುಕಾದುಕೂತಿದ್ದರು.ಇದುಇಂಡಿಯಾಕ್ಕೆಸಿಕ್ಕಿದಸ್ವಾತಂತ್ರ, ಇದುದಲಿತರಿಗೆಸಿಕ್ಕಿದಸ್ವಾತಂತ್ರ, ಶೋಷಿತರಿಗೆದೊರಕಿದಸ್ವಾತಂತ್ರ್ಯ.”

‘ನನ್ನಮಾಜಿಪ್ರೇಯಸಿ’, ‘ಬೆದೆಗೆಬಿದ್ದಎಮ್ಮೆಮತ್ತುಓಡಿಬಂದಕೋಣ’, ‘ಹೆಣದದುಡ್ಡುಮತ್ತುಮದುವೆಯಊಟ’, ‘ನಾಳಿನಕಸದಪಾಳಿ: ಮಾಲಕತ್ತಿ’  – ‘ಗೌರ್ಮೆಂಟ್ಬ್ರಾಹ್ಮಣ’ದ ಈ ಮನಕಲಕುವಪ್ರಸಂಗಗಳುಕಮ್ಮಟದಉದ್ದಕ್ಕೂಪದೇಪದೇಮಾರ್ದನಿಗೊಂಡವು. ಗೌರ್ಮೆಂಟ್ಬ್ರಾಹ್ಮಣ’ ಅಲ್ಲದೆ, ಸಿದ್ಧಲಿಂಗಯ್ಯಅವರ ‘ಊರುಕೇರಿ’, ದು. ಸರಸ್ವತಿಅವರ ‘ಈಗೇನ್ಮಾಡೀರಿ’, ವಿಜಯಸಿಗರನಹಳ್ಳಿಅವರ ‘ಬೂದಿಯಾಗದಕೆಂಡ’ – ಈ ದಲಿತಆತ್ಮಕತೆಗಳುಸಹಕಮ್ಮಟದಉದ್ದಕ್ಕೂಮಾರ್ದನಿಗೊಂಡವು. ಗೋಷ್ಟಿಗಳವಿಶ್ಲೇಷಣೆಗಳಲ್ಲೂ, ಮೊದಲದಿನಸಂಜೆಗಣೇಶ್ಉಡುಪಿಮತ್ತುತಂಡನಡೆಸಿಕೊಟ್ಟರಂಗಪ್ರಯೋಗದಂತೆಇದ್ದ ‘ಆತ್ಮಕತೆವಾಚನ’ದಲ್ಲೂ, ಚರ್ಚೆಸಂವಾದಗಳಲ್ಲೂ. ಈ  ಆತ್ಮಕತೆಗಳಆಯ್ದಭಾಗಗಳನ್ನುವಾಚನಾಭಿರುಚಿಕಮ್ಮಟದಲ್ಲಿಓದಿಗಾಗಿಆಯ್ದುಕಮ್ಮಟದಲ್ಲಿಭಾಗವಹಿಸಿದವರಿಗೆಕೊಡಲಾಗಿತ್ತು.

ವ್ಯಾಪಕಸಂವಾದ

ಕಮ್ಮಟದಭಾಗವಾಗಿ 4 ಸಂವಾದಗಳುನಡೆದವು. ಸಂವಾದ-1 ರಲ್ಲಿಡಾ. ನಟರಾಜಹುಳಿಯಾರ್‘ಆತ್ಮಕತೆಗಳು: ಸ್ವ, ಸಮಾಜ, ಸಂಸ್ಕೃತಿ’ ಬಗ್ಗೆಮಾತನಾಡಿದರು. ಅವರುಆತ್ಮಕತೆಗಳಮನೋವೈಜ್ಞಾನಿಕ, ತಾತ್ವಿಕ, ಸಾಹಿತ್ಯಕಆಯಾಮಗಳಅನಾವರಣಮಾಡುತ್ತಾ,ಜಗತ್ತಿನಹಲವುಪ್ರಸಿದ್ಧಆತ್ಮಚರಿತ್ರೆ/ಆತ್ಮಕತೆಗಳಉದಾಹರಣೆಗಳೊಂದಿಗೆಅವುಗಳಸಂಕೀರ್ಣವೈವಿಧ್ಯಮಯಲೋಕದಪರಿಚಯನೀಡಿದರು. ಸಂವಾದ-2 ರಲ್ಲಿ “ದಲಿತಆತ್ಮಕತೆಗಳಲ್ಲಿಸ್ತ್ರೀಪ್ರತಿನಿಧೀಕರಣ’ದಬಗ್ಗೆಡಾ. ಅನುಸೂಯಾಕಾಂಬಳೆಮಾತನಾಡುತ್ತಪುರುಷಮತ್ತುಮಹಿಳೆಯರಆತ್ಮಕತೆಗಳಲ್ಲಿಮಹಿಳೆಯರನ್ನುಪ್ರತಿನಿಧಿಸಿದಬಗೆಗಳಲ್ಲಿಇರುವವ್ಯತ್ಯಾಸಗಳಬಗ್ಗೆವಿಶ್ಲೇಷಿಸಿದರು. ಬಿ.ಎಂ. ರೋಹಿಣಿಮತ್ತುಜ್ಯೋತಿಚೇಳ್ಯಾರು ಈ ಸಂವಾದವನ್ನುತಮ್ಮಮಾತುಗಳಿಂದವಿಸ್ತರಿಸಿದರು.

ಸಂವಾದ-3 “ದಲಿತಆತ್ಮಕತೆಗಳಲ್ಲಿಪ್ರಭುತ್ವಮತ್ತುಪರ್ಯಾಯದಒಳನೋಟ”ಗಳಬಗ್ಗೆಇತ್ತು. ಡಾ. ಬಿ.ಎಂ.ಪುಟ್ಟಯ್ಯಗೌರ್ಮೆಂಟ್ಬ್ರಾಹ್ಮಣ’ ‘ಊರುಕೇರಿ’ ಮತ್ತು ‘ಈಗೇನ್ಮಾಡೀರಿ’ ಗಳನ್ನುನಿರ್ದಿಷ್ಟವಾಗಿತೆಗೆದುಕೊಂಡುಇವುಗಳಲ್ಲಿಪ್ರಭುತ್ವಮತ್ತುಪರ್ಯಾಯದಧೋರಣೆಯಲ್ಲಿಇರುವಮೂರುಮಾದರಿಗಳನ್ನುನಿರೂಪಿಸಿದರು. ಇವುಗಳಲ್ಲಿಸಾಮಾನ್ಯವಾಗಿರುವ – ಹಸಿವು, ಅಪಮಾನ, ಅನ್ಯಾಯಗಳಚಿತ್ರಣ; ಮಾಡದಅಪರಾಧಕ್ಕಾಗಿಶಿಕ್ಷೆ, ಊಳಿಗಮಾನ್ಯಪ್ರಭುತ್ವದಊಹೆಗೂಸಿಗಲಾರದಕ್ರೌರ್ಯದಅನಾವರಣದಬಗ್ಗೆಹೇಳುತ್ತಾ, ಪ್ರಭುತ್ವದಗ್ರಹಿಕೆಹಾಗೂಪರ್ಯಾಯಸೂಚನೆಯಲ್ಲಿರುವವ್ಯತ್ಯಾಸಗಳನ್ನುಮಂಡಿಸಿದರು. ಡಾ. ಕಿರಣ್ಗಾಜನೂರು, ಹರ್ಷಕುಮಾರ್ಕುಗ್ವೆತಮ್ಮಮಾತುಗಳಿಂದಸಂವಾದವನ್ನುವಿಸ್ತರಿಸಿದರು. “ದಲಿತಆತ್ಮಕತೆಗಳಲ್ಲಿರಾಷ್ಟ್ರದಕಲ್ಪನೆ’ ಬಗ್ಗೆಪ್ರೊ. ಉದಯಬಾರ್ಕೂರುಸಂವಾದವನ್ನುಆರಂಭಿಸಿದರು. ಸಾಹಿತ್ಯ ಇತಿಹಾಸಕಟ್ಟುವ ಒಂದು ಆಕರವಾಗಿದೆ. ಅದರಲ್ಲಿಆತ್ಮಕತೆಗಳ, ಅದರಲ್ಲೂ ದಲಿತ ಆತ್ಮಕತೆಗಳ ಪಾತ್ರದ ಬಗ್ಗೆಹಾಗೂ ಅವುಗಳಲ್ಲಿ ರಾಷ್ಟ್ರದ ಕಲ್ಪನೆ ಬಗ್ಗೆತಮ್ಮ ವಿಚಾರಗಳನ್ನುಮಂಡಿಸಿದರು. ಡಾ. ವಾಸುದೇವಬೆಳ್ಳೆ ಮತ್ತು ಡಾ. ಲತಾ  ಈಸಂವಾದವನ್ನು ತಮ್ಮ ಮಾತುಗಳಿಂದವಿಸ್ತರಿಸಿದರು.

ಕಮ್ಮಟದ ನಿರ್ದೇಶಕರಾಗಿದ್ದ ಡಾ. ವಿಠ್ಠಲಭಂಡಾರಿ ಪ್ರಾಸ್ತಾವಿಕ ಮಾತುಗಳನ್ನು ಆಡಿದ್ದಲ್ಲದೆ ಪ್ರತಿಗೋಷ್ಟಿಯ ಕೊನೆಗೆಕಮ್ಮಟದಲ್ಲಿ ಪಾಲುಗೊಂಡವರೊಡನೆ ಸಂವಾದವನ್ನು ನಡೆಸಿದರು. ಅನ್ನ-ಅಕ್ಷರಗಳಿಗಾಗಿದಲಿತರುಪಡುವಪರಿಪಾಟಲು, ನಿಜವಾದ ಕರ್ನಾಟಕದ ಅದರಲ್ಲೂ ಅಂಚಿನಲ್ಲಿರುವವರ ಸ್ಥಿತಿ, ಪ್ರಾಚೀನಮಧ್ಯಕಾಲೀನಕನ್ನಡಸಾಹಿತ್ಯದಲ್ಲಿಆತ್ಮಕತೆಗಳಅಸ್ತಿತ್ವ, ಪಾಶ್ಚಿಮಾತ್ಯ ಭಾರತೀಯ ಆತ್ಮಕತೆಗಳ ಪರಿಕಲ್ಪನೆಗಳಲ್ಲಿ ವ್ಯತ್ಯಾಸ, ರಾಷ್ಟ್ರದಕಲ್ಪನೆಗೆಕೊಟ್ಟಶಾಕ್,  ದಲಿತ ಮತ್ತು ಇತರ ಆತ್ಮಕತೆಗಳ ಗುಣಾತ್ಮಕವ್ಯತ್ಯಾಸಗಳು, ಭಾರತದ ಬಹುರೂಪಿ ಅಸ್ಮಿತೆಗೆ ಹಿಡಿದಕನ್ನಡಿ – ಇತ್ಯಾದಿಗಳಬಗ್ಗೆ ಆತ್ಮಕತೆಗಳ ಸಂದರ್ಭದಲ್ಲಿ ಸಂವಾದನಡೆಯಿತು.

 

 

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s