ಗಾಂಧಿ-ಅಂಬೇಡ್ಕರ್ ಚಾರಿತ್ರಿಕ ಮುಖಾಮುಖಿ

 

ಕುಂದಾಪುರ ಸಮುದಾಯವು ಗಾಂದಿಜಯಂತಿಯಂದು ಆಯೋಜಿಸಿದ್ದ ವರ್ತಮಾನದ ಜೊತೆ ಅಂಬೇಡ್ಕರ್ ಮರು ಓದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯ ಉಪನ್ಯಾಸಕರಾದ ಶ್ರೀ ವಾಸುದೇವ ಬೆಳ್ಳೆ ಇವರು ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ಗುರಿಯಲ್ಲಿ ಮುಖ್ಯ ವ್ಯತ್ಯಾಸಗಳನ್ನು ಹೊಂದಿರದಿದ್ದರೂ ಆರಿಸಿಕೊಂಡ ಮಾರ್ಗದಿಂದಾಗಿಯೇ ಎಂದೂ ಕೂಡದ ಹಳಿಗಳಂತೆ ಅವರಿಬ್ಬರ ದಾರಿಗಳನ್ನು ಗುರುತಿಸಲಾಗಿದೆ. ಆದರೆ, ಈ ಜನಪ್ರಿಯ ಗ್ರಹಿಕೆಯ ಹೊರತಾಗಿಯೂ ಅವರಿಬ್ಬರು ಒಬ್ಬರಿಗೊಬ್ಬರೂ ಪೂರಕವಾಗಿ ಯೋಚಿಸಿದ, ಪರಸ್ಪರರ ಮೇಲೆ ಪ್ರಭಾವಿಸಿದ ಸಂಗತಿಗಳನ್ನು ಗುರುತಿಸಬಹುದು ಎಂದರು. ಮನ:ಪರಿವರ್ತನೆಯಿಂದ ಮಾತ್ರ ಬದಲಾವಣೆಗಳನ್ನು ತರಲು ಸಾಧ್ಯೆವೆಂದು ನಂಬಿದ್ದ ಗಾಂಧಿ ಮತ್ತು ಕಾನೂನಿನ ಮೂಲಕ ಅಸಮಾನತೆಗಳನ್ನು ಸರಿಪಡಿಸಬಹುದೆಂದು ವಾದಿಸುತ್ತಿದ್ದ ಅಂಬೇಡ್ಕರ್ ಇಬ್ಬರೂ ನಮಗೆ ಈಗಲೂ ಪ್ರಸ್ತುತ ಎಂದು ಅವರು ಅಭಿಪ್ರಾಯಪಟ್ಟರು. ವೇದಿಕೆಯಲ್ಲಿ ಸಮುದಾಯ ಕರ್ನಾಟಕದ ಶ್ರೀ ಸುರೇಂದ್ರ ರಾವ್, ಸಾಹಿತ್ಯ ಸಮುದಾಯದ ಡಾ. ವಿಠಲ ಭಂಡಾರಿ ಮತ್ತು ಕುಂದಾಪುರ ಸಮುದಾಯದ ಅಧ್ಯಕ್ಷರಾದ ಶ್ರೀ ಉದಯ ಗಾಂವಕಾರ ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದ ಭಾಗವಾಗಿ ಸಮುದಾಯ ಕುಂದಾಪುರ ತಂಡವು ವಾಸು ಗಂಗೇರ ನಿರ್ಧೇಶನದಲ್ಲಿ ಪ್ರಸ್ತುತ ಪಡಿಸಿದ `ಮಹಾತ್ಮ’ ಮತ್ತು ರಂಗಸುರಭಿ ಬೈಂದೂರು ತಂಡವು ಗಣೇಶ್ ಎಂ ನಿರ್ದೇಶನದಲ್ಲಿ ಪ್ರಸ್ತುತಪಡಿಸಿದ ವೇಟಿಂಗ ಫಾರ್ ದ ವೀಸಾ ನಾಟಕಗಳನ್ನು ಪ್ರದರ್ಶಿಸಲಾಯಿತು. ಸಮುದಾಯದ ಕಾರ್ಯದರ್ಶಿ ಸದಾನಂದ ಬೈಂದೂರು ಕಾರ್ಯಕ್ರಮ ನಿರೂಪಿಸಿದರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s